ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಯೋಗ ಗುರು ಬಾಬಾ ರಾಮದೇವರಿಗೆ ದಿಲ್ಲಿ ಹೈಕೋರ್ಟು ಎಚ್ಚರಿಕೆ ನೀಡಿದೆ. ಕೊರೋನ ಪ್ರತಿರೋಧ ಮದ್ದು ಎಂಬ ನೆಲೆಯಲ್ಲಿ ಕೊರೊನಿಲ್ ಕಿಟ್ಗೆ ವ್ಯಾಪಕ ಪ್ರಚಾರ ನಡೆಸುವುದನ್ನು ತಡೆಯಬೇಕೆಂದು ಡಿಎಂಎ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.
ಪ್ರಕರಣವು ಪುನಃ ಜುಲೈ 13ಕ್ಕೆ ವಿಚಾರಣೆಗೆ ಬರಲಿದೆ. ಅಲ್ಲಿಯವರೆಗೆ ಯಾವುದೇ ಹೇಳಿಕೆಯನ್ನು ರಾಮ್ ದೇವ್ ನೀಡಬಾರದೆಂದು ರಾಮ್ದೇವ್ ವಕೀಲರಿಗೆ ಕೋರ್ಟು ತಾಕೀತು ಮಾಡಿದೆ.
ಕೊರೋನ ಪ್ರತಿರೋಧದ ಆಧುನಿಕ ವೈದ್ಯಶಾಸ್ತ್ರದ ಮದ್ದುಗಳಿಂದ ಕೊರೋನ ವಾಸಿಯಾಗುವುದಿಲ್ಲ ಎಂದು ರಾಮ್ ದೇವ್ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಕೊರೋನ ವ್ಯಾಕ್ಸಿನ್ ವಿರುದ್ಧ ರಾಮ್ದೇವ್ ಬಹಿರಂಗವಾಗಿ ರಂಗಪ್ರವೇಶಿಸಿದ್ದು ವೈದ್ಯರನ್ನು ರೇಗಿಸಿತ್ತು. ರಾಮ್ ವಿರುದ್ಧ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರಕರಣ ದಾಖಲಿಸಿದೆ.












