ಪ್ರಧಾನಿಗೆ ಕೊಲೆ ಬೆದರಿಕೆ: ಓರ್ವನ ಬಂಧನ

0
845

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಲೆ ಬೆದರಿಕೆ ಹಾಕಿದ 22 ವರ್ಷದ ಯುವಕನನ್ನು ದಿಲ್ಲಿಯ ಕಜೂರಿ ಖಾಸ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ಕರೆಮಾಡಿ ಪ್ರಧಾನಿಯನ್ನು ಕೊಲ್ಲುವೆ ಎಂದು ಈತ ಹೇಳಿಕೊಂಡಿದ್ದ. ಗುರುವಾರ ಸಂಜೆ ಬೆದರಿಕೆ ಸಂದೇಶ ಬಂದಿತ್ತು. ನಾನು ಮೋದಿಯನ್ನು ಕೊಲ್ಲ ಬಯಸುವೆ ಎಂದಿದ್ದ. ನಂತರ ಪೊಲೀಸರು ತನಿಖೆ ಮಾಡಿ ಕಜೂರಿ ಖಾಸ್‍ನಿಂದ ಯುವಕನನ್ನು ಸೆರೆ ಹಿಡಿದಿದ್ದಾರೆ. ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ತನಗೆ ಜೈಲಿಗೆ ಹೋಗುವ ಆಸೆಯಿತ್ತು ಅದಕ್ಕೆ ಬೆದರಿಕೆ ಸಂದೇಶ ಕೊಟ್ಟೆ ಎಂದಿದ್ದಾನೆ. ಹಲವು ಪ್ರಕರಣದಲ್ಲಿ ಈತ ಆರೋಪಿಯೆಂದು ಪೊಲೀಸರು ಹೇಳಿದ್ದಾರೆ. ಪ್ರಧಾನಿಗೆ ಸಂಬಂಧಿಸಿದ ಪ್ರಕರಣವಾದ್ದರಿಂದ ಈತನನ್ನು ಇಂಟಲಿಜೆನ್ಸ್ ವಿಚಾರಣೆ ನಡೆಸಲಿದೆ.