ಮಹಾರಾಷ್ಟ್ರದ ಕಂಪೆನಿಯಲ್ಲಿ ಅನಿಲ ಸೋರಿಕೆ; ಉಸಿರುಗಟ್ಟಿದ ಜನರು

0
546

ಸನ್ಮಾರ್ಗ ವಾರ್ತೆ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದ ಒಂದು ಫ್ಯಾಕ್ಟರಿಯಿಂದ ಅನಿಲ ಸೋರಿಕೆ ನಡೆದಿದ್ದು ಪರಿಣಾಮವಾಗಿ ಊರಿನ ಜನತೆಗೆ ಉಸಿರುಗಟ್ಟಿದ ಅನುಭವವಾಗಿದೆ. ಗುರುವಾರ ರಾತ್ರೆ ಅನಿಲ ಸೋರಿಕೆ ನಡೆದಿದ್ದು. ಗಂಟೆಗಳ ಕಾಲ ಭಾರೀ ಉಸಿರಾಟ ತೊಂದರೆ ಎದುರಿಸಬೇಕಾಯಿತು. ಊರವರು ದಿಗ್ಭ್ರಾಂತರಾದರು. ಹೊಗೆ ವಾತಾವರಣದಲ್ಲಿ ತಂಗಿದ್ದರಿಂದ ಸ್ಫೋಟದ ಭೀತಿಯು ಸೃಷ್ಟಿಯಾಗಿತ್ತು.

ಫ್ಯಾಕ್ಟರಿಯಲ್ಲಿ ಇರಿಸಿದ್ದ ಸಲ್ಫ್ಯೂರಿಕ್ ಆ್ಯಸಿಡ್ ಬೆಂಝೆಲ್ ಆಸಿಡ್ ವರ್ತಿಸಿ ಅಪಾಯಕಾರಿ ಹೊಗೆ ಬಿಟ್ಟಿತು ಎನ್ನಲಾಗುತ್ತಿದೆ. ಮೂರು ಕಿಲೊ ಮೀಟರ್ ವ್ಯಾಪ್ತಿಯಲ್ಲಿ ಫ್ಯಾಕ್ಟರಿಯ ಹೊಗೆ ಹರಡಿತ್ತು.

ವೀಡಿಯೊ ನೋಡಿ…