ಛತ್ತೀಸ್ಗಢದ ಬೆನ್ನಿಗೆ ವ್ಯಾಕ್ಸಿನ್ ಸರ್ಟಿಫಿಕೇಟ್‌‌ನಿಂದ ಪ್ರಧಾನಿ ನರೇಂದ್ರ ಮೋದಿಯ ಚಿತ್ರವನ್ನು ತೆಗೆದು ಹಾಕಿದ ಪ.ಬಂಗಾಳ ಸರಕಾರ

0
766

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ:ಛತ್ತೀಸ್ಗಢದ ಬೆನ್ನಿಗೆ ಕೊರೋನ ವ್ಯಾಕ್ಸಿನ್ ಸರ್ಟಿಫಿಕೇಟಿನಿಂದ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಪಶ್ಚಿಮಬಂಗಾಳ ಸರಕಾರ ತೆಗೆದು ಹಾಕಿದೆ. ಬದಲಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಚಿತ್ರ ಮುದ್ರಿಸಿದೆ. ರಾಜ್ಯ ಸರಕಾರವು ಹಣಕೊಟ್ಟು ವ್ಯಾಕ್ಸಿನ್ ಖರೀದಿಸುತ್ತಿದೆ ಆದ್ದರಿಂದ ಮೋದಿ ಚಿತ್ರ ಬೇಡ ಎಂದು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂರನೇ ಹಂತದ ವ್ಯಾಕ್ಸಿನ್ ಸ್ವೀಕರಿಸಿದವರಿಗೆ ಮಾತ್ರ ಮಮತಾರ ಚಿತ್ರ ಇರುವ ಸರ್ಟಿಫಿಕೆಟ್ ಕೊಡಲಾಗುವುದು. ಮೂರನೇ ಹಂತದ ವ್ಯಾಕ್ಸಿನ್ ನೀಡುವುದು ಹದಿನೆಂಟು ಮತ್ತು 44ವರ್ಷದವರಿಗಾಗಿದೆ.

ಕಾಂಗ್ರೆಸ್ ಆಳ್ವಿಕೆಯ ಛತ್ತೀಸ್ಗಡ ಈಗಾಗಲೇ ವ್ಯಾಕ್ಸಿನ್ ಸರ್ಟಿಫಿಕೆಟ್‍ನಿಂದ ಮೋದಿ ಚಿತ್ರ ತೆರವುಗೊಳಿಸಿದೆ. ಮುಖ್ಯಮಂತ್ರಿ ಭೂಪೇಶ್ ವಘೇಲ್‍ರ ಚಿತ್ರ ಅಂಟಿಸಿದೆ. ವ್ಯಾಕ್ಸಿನ್ ವಿತರಣೆಯಿಂದ ಕೇಂದ್ರ ಸರಕಾರ ಹಿಂದೆ ಸರಿದ ಪರಿಸ್ಥಿತಿಯಲ್ಲಿ ಪ್ರಧಾನಿಯ ಚಿತ್ರ ಹಾಕಿಲ್ಲ ಎಂದು ಛತ್ತೀಸ್‍ಗಡ ಆರೋಗ್ಯ ಸಚಿವರು ಹೇಳಿದರು.

ಪ.ಬಂಗಾಳ ವಿಧಾನಸಭಾ ಚುನಾವಣಾ ಸಮಯದಲ್ಲಿ ಮೋದಿಯ ಚಿತ್ರ ಅಂಟಿಸಿದ ವ್ಯಾಕ್ಸಿನ್ ಸರ್ಟಿಫಿಕೆಟ್ ನೀಡುತ್ತಿರುವುದನ್ನು ಸೂಚಿಸಿ ಚುನಾವಣಾ ಸಂಹಿತೆ ಉಲ್ಲಂಘಿಸಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.