ದಿಲ್ಲಿ ಲಾಕ್‍ಡೌನ್ ಸಡಿಲಿಕೆ: ಮಾರುಕಟ್ಟೆಗೆ ಅನುಮತಿ, ಮೆಟ್ರೋ ಸರ್ವಿಸ್ ಆರಂಭ

0
525

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನ ರೋಗಿಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಲ್ಲಿ ಸಡಿಲಿಕೆಯನ್ನು ದಿಲ್ಲಿ ಸರಕಾರ ಮಾಡಿದೆ. ಮಾರುಕಟ್ಟೆ, ಮಾಲ್ ತೆರೆಯಬಹುದು. ಒಂದು ದಿನ ಬಂದ್ ಹಾಗೂ ಇನ್ನೊಂದು ದಿನ ತೆರೆಯುವುದು ಈ ರೀತಿ ಸಡಿಲಿಕೆಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಶೇ.50ರಷ್ಟು ಪ್ರಯಾಣಿಕರೊಂದಿಗೆ ದಿಲ್ಲಿ ಮೆಟ್ರೊ ಓಡಾಟ ನಡೆಸಲಿದೆ.

ಖಾಸಗಿ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿ ಇರಬೇಕು. ಸರಕಾರಿ ಕಚೇರಿಗಳಲ್ಲಿ ಎ ಗ್ರೂಪ್ ಉದ್ಯೋಗಿಗಳು ಎಲ್ಲ ದಿವಸ ಇರಬೇಕು. ಗ್ರೂಪ್ ಬಿಯವರು ಶೇ. 50ರಷ್ಟು ಹಾಜರಾತಿ ಇದ್ದರೆ ಸಾಲುತ್ತದೆ.

420 ಟನ್ ಆಕ್ಸಿಜನ್ ಸಂಗ್ರಹಿಸುವ ವ್ಯವಸ್ಥೆ ಆರಂಭಿಸಲಾಗುವುದು. ಕೊರೋನದ ರೂಪಾಂತರ ಪತ್ತೆಹಚ್ಚಲು ಎರಡು ಲ್ಯಾಬ್‍ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ದಿಲ್ಲಿಯಲ್ಲಿ ಕಳೆದ ದಿವಸ 400ಮಂದಿಗೆ ಮಾತ್ರ ಕೊರೋನ ದೃಡಪಟ್ಟಿದೆ. ಟೆಸ್ಟ್ ಪಾಸಿಟಿವ್ ಶೇ.0.5ರಷ್ಟಿದೆ.