ಸಾರ್ವಜನಿಕ‌ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ನಿಯಮವನ್ನು ತೆರವುಗೊಳಿಸಿದ ಫ್ರಾನ್ಸ್‌

0
477

ಸನ್ಮಾರ್ಗ ವಾರ್ತೆ

ಪ್ಯಾರಿಸ್: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬೇಡ ಎಂದು ಫ್ರಾನ್ಸ್ ಪ್ರಧಾನಿ ಜಿನ್ ಕಾಸ್ಟಕ್ಸ್ ಹೇಳಿದ್ದಾರೆ. ಇಂದಿನಿಂದ ಫ್ರಾನ್ಸ್‌ನಲ್ಲಿ ಸಾರ್ವಜನಿಕ ಸ್ಥಳದಿಂದ ಮಾಸ್ಕ್ ಧರಿಸುವ ಅಗತ್ಯ ಇರುವುದಿಲ್ಲ. ಆದರೆ ಕೊರೋನ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ. ವ್ಯಾಕ್ಸಿನೇಶನ್ ಮುಂದುವರಿಯಲಿದೆ. ಇದೇ ವೇಳೆ ಅತಿ ಹೆಚ್ಚು ಜನರು ಸೇರುವ ಸಾರ್ವಜನಿಕ ವ್ಯವಸ್ಥೆಗಳಲ್ಲಿ, ಸ್ಟೂಡಿಯೋಗಳಲ್ಲಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕೆಂದು ಅವರು ಹೇಳಿದರು.

ದೇಶದ ಆರೋಗ್ಯ ಸ್ಥಿತಿ ವೇಗವಾಗಿ ಚೇತರಿಕೆಯಾಗುತ್ತಿದೆ. ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಗುರುವಾರದಿಂದ ತೆರವುಗೊಳಿಸಲಾಗಿದೆ. ಈ ತಿಂಗಳು 20ಕ್ಕೆ ರಾತ್ರೆ ಕರ್ಫ್ಯೂ ತೆರವುಗೊಳಿಸಲಾಗುವುದು. ಆದರೆ ಈ ತಿಂಗಳು ಮೂವತ್ತನೇ ತಾರೀಕಿಗೆ ಕರ್ಫ್ಯೂ ತೆರವುಗೊಳಿಸುವುದಾಗಿ ಈ ಹಿಂದೆಯೇ ನಿರ್ಧರಿಸಲಾಗಿತ್ತು. ಆದರೆ ಹತ್ತು ದಿನ ಮೊದಲೇ ಕರ್ಫ್ಯೂ ತೆರವುಗೊಳಿಸಲಾಗುತ್ತಿದೆ. ಫ್ರಾನ್ಸಿನ ಸರಾಸರಿ ಪ್ರತಿದಿನ ಕೊರೋನ ಪ್ರಕರಣಗಳಲ್ಲಿ ಇಳಿಮುಖ ದಾಖಲಾಗಿದೆ. ಮಂಗಳವಾರ 3,200 ಪ್ರಕರಣಗಳು ಮಾತ್ರ ಕಂಡು ಬಂದಿದೆ. 2020 ಆಗಸ್ಟ್ ನಂತರ ದೇಶದಲ್ಲಿ ಕೊರೋನ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಪ್ರಕರಣಗಳು ದಾಖಲಾದ ದಿನ ಇದು. ದೇಶದಲ್ಲಿ 35 ದಶಲಕ್ಷ ಜನರಿಗೆ ತಿಂಗಳೊಳಗೆ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.