ಬಯೊಲಾಜಿಕಲ್ ಇ ವ್ಯಾಕ್ಸಿನ್ ಶೇ.90ರಷ್ಟು ಫಲಪ್ರದ

0
612

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತದ ಬಯೊಲಾಜಿಕಲ್ ಇ ವ್ಯಾಕ್ಸಿನ್ ಕೊರೊನ ಪ್ರತಿರೋಧದಲ್ಲಿ ಶೇ. 90ರಷ್ಟು ಯಶಸ್ವಿಯಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಕೊರೋನ ಪ್ರತಿರೋಧದಲ್ಲಿ ನಿರ್ಣಾಯಕ ಪಾತ್ರ ವಹಿಸಲು ಬಯೊಲಾಜಿಕಲ್ ಇ ವ್ಯಾಕ್ಸಿನ್‍ಗೆ ಸಾಧ್ಯವಿದೆಯೆಂದು ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದ್ದು, ವ್ಯಾಕ್ಸಿನ್‍ನ ಮೂರನೇ ಹಂತದ ಪರೀಕ್ಷೆ ಪ್ರಗತಿಯಲ್ಲಿದೆ.

ಅಕ್ಟೋಬರ್ ಗೆ ಮಾರುಕಟ್ಟೆಯಲ್ಲಿ ಇದು ಸಿಗಲಿದೆ ಎಂದು ಕೇಂದ್ರ ಸರಕಾರದ ವ್ಯಾಕ್ಸಿನೇಶನ್ ವರ್ಕಿಂಗ್ ಗ್ರೂಪ್ ಚೇರ್‍ಮೆನ್ ಎನ್.ಕೆ. ಅರೋರ ಹೇಳಿದ್ದಾರೆ. ಎಲ್ಲ ವಯಸ್ಸಿನವರಿಗೂ ಬಯೊಲಾಜಿಕಲ್ ಇ ವ್ಯಾಕ್ಸಿನ್ ನಿರ್ಮಿಸುವ ಕೊರಬೆವಾಕ್ಸ್ ವ್ಯಾಕ್ಸಿನ್ ಫಲಪ್ರದವಾಗಿದೆ. ಎರಡು ಡೋಸ್ 250ರೂಪಾಯಿಗೆ ಸಿಗಲಿದೆ. ಹೆಚ್ಚು ವಿಳಂಬಿಸದೆ ಇದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದವರು ಹೇಳಿದರು.

ಜೊತೆಗೆ ಸಿಡುಸ್ ಕಡಿಲ ನಿರ್ಮಿಸುವ ಕೊರೊನ ವ್ಯಾಕ್ಸಿನ್ ಕೂಡ ಶೀಘ್ರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಸಿರಂ ಇನ್ಸಿಟಿಟ್ಯೂಟಿನ ನೊವಾವಾಕ್ಸ್ ಕೂಡ ಪರೀಕ್ಷಾ ಹಂತದಲ್ಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.