ಸಾರ್ವಜನಿಕ ವೇದಿಕೆಯಲ್ಲಿ ಅಭಿಶೇಕ್ ಬ್ಯಾನರ್ಜಿಗೆ ಕಪಾಲ ಮೋಕ್ಷ ಮಾಡಿದ್ದ ವ್ಯಕ್ತಿ ನಿಗೂಢ ಸಾವು

0
933

ಸನ್ಮಾರ್ಗ ವಾರ್ತೆ

ಕೊಲ್ಕತಾ: ತೃಣಮೂಲ ಕಾಂಗ್ರೆಸ್ ನ ಸಂಸದ ಅಭಿಷೇಕ್ ಬ್ಯಾನರ್ಜಿಗೆ 2015ರಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಕಪಾಳಕ್ಕೆ ಹೊಡೆದು ಸುದ್ದಿಯಾಗಿದ್ದ ವ್ಯಕ್ತಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಗುರುವಾರ ಬೆಳಗ್ಗೆ ದೇವಾಶಿಷ್ ಆಚಾರ್ಯ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಅವರನ್ನು ಕೆಲವರು ತಾಮ್ಲುಕ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಬಂದವರೆ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುವುದಾಗಿ ವರದಿಯಾಗಿದೆ.

ಕಳೆದ ಗುರುವಾರ ಬೆಳಗ್ಗೆ 4.10ಕ್ಕೆ ದೇವಾಶಿಷ್‍ರನ್ನು ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು. ಚಿಕಿತ್ಸೆ ಪಡೆಯುತ್ತಿದ್ದ ಅವರು ಮಧ್ಯಾಹ್ನದ ಹೊತ್ತಿಗೆ ಅಸುನೀಗಿದ್ದಾರೆ. ದೇವಾಶಿಷ್‍ರನ್ನು ಹತ್ಯೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದು, ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ. ಬಿಜೆಪಿ ಕೂಡ ತನಿಖೆಗೆ ಆಗ್ರಹಿಸಿದೆ. 2020ರಲ್ಲಿ ದೇವಾಶಿಷ್ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಇಬ್ಬರು ಗೆಳೆಯರೊಂದಿಗೆ ಜೂನ್ 16ರಂದು ಸಂಜೆ ದೇವಾಶಿಷ್ ಆಚಾರ್ಯ ಹೊರಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೊನೊಪೆಟ ಟೊಲ್ ಪ್ಲಾಝದ ಸಮೀಪದ ಚಹಾದಂಗಡಿಯೊಂದರಲ್ಲಿ ಇವರು ಚಾ ಕುಡಿದಿದ್ದರು. ನಂತರ ಅವರಿಗೆ ಒಂದು ಒಂದು ಫೋನ್ ಬಂದಿದ್ದರಿಂದ ಅವರು ಅಲ್ಲಿಂದ ಹೊರಟು ಹೋಗಿದ್ದರು. ಫೋನ್ ಬಂದ ಬಳಿಕ ದೇವಾಶಿಷ್ ಎಲ್ಲಿಗೆ ಹೋದರೆಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.