ಸನ್ಮಾರ್ಗ ವಾರ್ತೆ
ಮುಂಬೈ: ಭೀಮಾ ಕೊರೆಂಗಾವ್ ಪ್ರಕರಣದಲ್ಲಿ ಮಾವೊವಾದಿಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಎನ್ಐಎಯಿಂದ ಬಂಧನಕ್ಕೊಳಗಾಗಿ ಜೈಲುಪಾಲಾಗಿರುವ ಮಾನವ ಹಕ್ಕು ಕಾರ್ಯಕರ್ತ, ಕ್ರೈಸ್ತ ಪಾದ್ರಿ, ಫಾ. ಸ್ಟಾನ್ ಸ್ವಾಮಿಯವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಸದ್ಯ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಕ್ಸಿಜನ್ ಮಟ್ಟ ಕುಸಿದ ಕಾರಣ ಉಸಿರಾಟ ತೊಂದರೆ ಅವರಿಗಾಗಿದೆ ಎಂದು ಅವರ ವಕೀಲ ಮಿಹಿರ್ ದೇಸಾಯಿ ತಿಳಿಸಿದರು. ಹೈಕೋರ್ಟು ಆದೇಶ ಪ್ರಕಾರ ಮೇ 30ಕ್ಕೆ ಅವರನ್ನು ಚಿಕಿತ್ಸೆಗೆ ಸ್ವಂತ ಖರ್ಚಿನಲ್ಲಿ ತಲೋಜ ಜೈಲಿನಿಂದ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಕರೆತರಲಾಗಿತ್ತು.
ತನಗೆ ಜಾಮೀನು ಕೊಡುವುದಿಲ್ಲದಿದ್ದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿಲ್ಲ. ಜೈಲಿನಲ್ಲಿಯೇ ಸಾಯುವೆ ಎಂಧು ಜೈಲಿನಲ್ಲಿ ಅವರು ವೀಡಿಯೊ ಕಾನ್ಫೆರೆನ್ಸ್ ಮೂಲಕ ಹೈಕೋರ್ಟು ಜಡ್ಜ್ ಗೆ ತಿಳಿಸಿದ್ದರು. ಹೈಕೋರ್ಟ್ ಆದೇಶದ ನಂತರ ಮೇ 30ಕ್ಕೆ ಚಿಕಿತ್ಸೆಗಾಗಿ ಸ್ಟಾನ್ ಸ್ವಾಮಿಯವರನ್ನು ಅವರದೇ ಖರ್ಚಿನಲ್ಲಿ ತಲೋಜ ಜೈಲಿನಿಂದ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಕರೆತರಲಾಗಿದೆ. ವಕೀಲರ ಮಧ್ಯಪ್ರವೇಶದಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೋರ್ಟು ಒಪ್ಪಿಕೊಂಡಿತು. ಈ ನಡುವೆ ಅವರಿಗೆ ಕಳೆದ ತಿಂಗಳು ಕೊರೊನ ಬಾಧಿಸಿತ್ತು.
ಕಳೆದ ವರ್ಷ ಅಕ್ಟೋಬರ್ 8ಕ್ಕೆ ಅವರನ್ನು ಎನ್ಐಎ ಬಂಧಿಸಿತ್ತು. ಅಂದಿನಿಂದ ತನ್ನ ಶಕ್ತಿಗಳು ಒಂದೊಂದಾಗಿ ಕುಂದಿ ಹೋಗಿದೆ. ಪರರ ಸಹಾಯವಿಲ್ಲದೆ ಏನೂ ಮಾಡಲಾಗುವುದಿಲ್ಲ ಎಂದು ಸ್ವಾಮಿ ಕೋರ್ಟಿಗೆ ತಿಳಿಸಿದ್ದರು. ವಯೋವೃದ್ಧ ಮತ್ತು ರೋಗಿಯಾದ ಅವರಿಗೆ ಅಗತ್ಯವಾದ ವೈದ್ಯಕೀಯ ಸೌಕರ್ಯ ಮತ್ತು ಜಾಮೀನು ತುರ್ತಾಗಿ ನೀಡಬೇಕೆಂದು ಜನತಾ ಸಮಿತಿ ಮತ್ತು ಆಕ್ಟಿವಿಸ್ಟ್ಗಳ ಒಕ್ಕೂಟವಾದ ಝಾರ್ಕಂಡ್ ಜನಾಧಿಕಾರ್ ಮಹಾಸಭಾ ಆಗ್ರಹಿಸಿತ್ತು.
2018 ಜನುವರಿ ಒಂದರಂದು ಭೀಮ ಕೊರೆಗಾವ್ನಲ್ಲಿ ದಲಿತ ಸಂಘಟನೆಗಳ ವತಿಯಿಂದ ನಡೆದ ಎಲ್ಗಾರ್ ಪರಿಷತ್ನ ಹಿಂದೆ ಮಾವೊವಾದಿಗಳಿದ್ದರೆಂದು ಆರೋಪಿಸಿ ಫಾ. ಸ್ಟಾನ್ ಸ್ವಾಮಿ, ಸುದೀರ ಧಾವ್ಲ, ಶೇಆ ಸೆನ್, ರೋಣ ವಿಲ್ಸನ್ , ಸುಧಾ ಭಾರದ್ವಾಜ್, ಗೌತಂ ನವ್ಲಾಕ್ ,ವರವರರಾವು, ಪ್ರೋ. ಸಾಯಿಬಾಬ, ಫಾ.ಸ್ಟಾನ್ ಸ್ವಾಮಿ, ಅರುಣ್ ಫೆರೆರ, ವೆರ್ನಾರ್ ಗೋಲ್ವಾಸಾಲ್ವೆಸ್, ಸುರೇಂದ್ ರಗಾಡ್ಲಿಂಗ್ ಮುಂತಾದ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.












