ಭಾರತ ಮಾತೆಗೆ ಅಪಮಾನ: ಕ್ರೈಸ್ತ ಪಾದ್ರಿ ಬಂಧನ

0
912

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಜು.24: ಭಾರತ ಮಾತೆಯನ್ನು ಅಪಮಾನಿಸಿದ ಪ್ರಕರಣದಲ್ಲಿ ಕ್ರೈಸ್ತ ಪಾದ್ರಿ ಜಾರ್ಜ್ ಪೊನ್ನಯ್ಯರನ್ನು ತಮಿಳ್ನಾಡು ಪೊಲೀಸರು ಬಂಧಿಸಿದ್ದಾರೆ. ಯುಎಪಿಎ ಕಾನೂನಡಿಯಲ್ಲಿ ಜೈಲಿನಲ್ಲಿದ್ದು ಮೃತಪಟ್ಟಿದ್ದ ಸ್ಟಾನ್ ಸ್ವಾಮಿಯವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಕ್ಕಾಗಿ ಜಾರ್ಜ್ ಪೊನ್ನಯ್ಯರನ್ನು ಮಧುರೆ ಪೊಲೀಸರು ಬಂಧಿಸಿದರು.

ಕಳೆದ ರವಿವಾರ ಕನ್ಯಾಕುಮಾರಿ ಅರಮನಯಿಲ್ಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತಮಾತೆಯಿಂದ ರೋಗ ಹರಡದಂತೆ ಚಪ್ಪಲಿ ಶೂ ಬಳಸುವುದು ಎಂದು ಪೊನ್ನಯ್ಯ ಹೇಳಿದ್ದರು ಎನ್ನಲಾಗಿದೆ. ಹಿಂದೂ ಧರ್ಮ ಮತ್ತು ನಂಬಿಕೆಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಂಘಪರಿವಾರ ಪ್ರಚಾರ ಮಾಡಿತ್ತು.

ಭಾಷಣದ ಎಡಿಟೆಡ್ ದೃಶ್ಯಗಳು ಪ್ರಸಾರವಾದ ಬಳಿಕ ಫಾದರ್‌ರನ್ನು ಬಂಧಿಸಬೇಕೆಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ರಂಗಪ್ರವೇಶಿಸಿದ್ದವು. ಪೊನ್ನಯ್ಯರ ವಿರುದ್ಧ ಕನ್ಯಾಕುಮಾರಿಯಲ್ಲಿ 30ಕ್ಕೂ ಹೆಚ್ಚು ದೂರುಗಳು ಪೊಲೀಸರಿಗೆ ಸಿಕ್ಕಿದೆ. ಧಾರ್ಮಿಕ ಸ್ಪರ್ಧೆ, ಸಾಮಾಜದಲ್ಲಿ ಒಡಕುಂಟು ಮಾಡುವಿಕೆ, ಕೊರೋನ ಮಾನನದಂಡ ಉಲ್ಲಂಘಿಸಿ ಸಭೆ ನಡೆಸಿದ ಇತ್ಯಾದಿ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.