ಸನ್ಮಾರ್ಗ ವಾರ್ತೆ
ಕಲ್ಲಿಕೋಟೆ: ಎರಡು ವರ್ಷಗಳ ಹಿಂದೆ ಕೇರಳದಲ್ಲಿ ದಾಂಧಲೆಯಾಡಿದ್ದ ನಿಫಾಹ್ ರೋಗ ಮತ್ತೆ ಮರುಕುಳಿಸಿದ್ದು, ನಿಫಾಹ್ ನಿಂದ ಮೃತಪಟ್ಟ ಘಟನೆಯ ನಂತರ ರೋಗಿಯ ಸಂಪರ್ಕದಲ್ಲಿದ್ದವರ ಪಟ್ಟಿಯನ್ನು ತಯಾರಿಸಲಾಗಿದ್ದು, 251 ಮಂದಿ ಒಳಗೊಂಡಿರುವುದಾಗಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಫಾಹ್ ರೋಗದಿಂದ ಮೃತಪಟ್ಟ ಮಗುವಿಗೆ ಸಂಬಂಧಪಟ್ಟವರು ಇವರು.
ಇದೇ ವೇಳೆ ರೋಗ ಲಕ್ಷಣಗಳ ಹೊರಗೆ ಕಂಡು ಬಂದವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಮಗುವಿನ ತಾಯಿ ಮತ್ತು ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಈ ಹಿಂದೆ ರೋಗ ಲಕ್ಷಣಗಳು ಗೋಚರಿಸಿದ್ದವು. ಐದು ಮಂದಿಗೆ ಹೊಸದಾಗಿ ರೋಗ ಲಕ್ಷಣಗಳು ಕಂಡು ಬಂದಿವೆ. ಒಟ್ಟು ಎಂಟು ಮಂದಿಯ ಸ್ಯಾಂಪಲ್ಗಳನ್ನು ಪುಣೆಯ ಲ್ಯಾಬ್ಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇನ್ನಷ್ಟೇ ಫಲಿತಾಂಶಸಿಗಬೇಕಾಗಿದೆ.
251 ಮಂದಿಯ ಸಂಪರ್ಕ ಪಟ್ಟಿಯಲ್ಲಿ ಹಲವು ಮಂದಿಗೆ ರೋಗ ಹರಡಿರುವ ಸಾಧ್ಯತೆ ಇದೆ ಎಂದು ವಿಶೇಷ ಪಟ್ಟಿಯನ್ನೂ ತಯಾರಿಸಲಾಗಿದೆ. ಇವರು 32 ಮಂದಿ. ಇವರನ್ನು ನಿಗಾದಲ್ಲಿರಿಸಲಾಗಿದೆ.












