ಭವಾನಿ ಪುರ ಉಪಚುನಾವಣೆ: ಮಮತಾ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದ ಕಾಂಗ್ರೆಸ್

0
591

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ.ಬಂಗಾಳದ ಭವಾನಿಪುರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿಯವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ನಿರ್ಧರಿಸಿದ್ದು ದಕ್ಷಿಣ ಕೊಲ್ಕತಾದ ಈ ಕ್ಷೇತ್ರದಲ್ಲಿ ಮಮತಾರನ್ನು ಅಭ್ಯರ್ಥಿಯೆಂದು ತೃಣಮೂಲಕ ಕಾಂಗ್ರೆಸ್ ಘೋಷಿಸಿದೆ. ಎಪ್ರಿಲ್-ಮೇ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ ಮಮತಾ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ವಿರುದ್ಧ ಕೆಲವೇ ಮತಗಳ ಅಂತರದಲ್ಲಿ ಸೋತಿದ್ದರು.

ತೃಣಮೂಲ ತೊರೆದು ಬಿಜೆಪಿಗೆ ಹೋದ ಸುವೇಂದು ಅಧಿಕಾರಿಯ ಸವಾಲನ್ನು ಸ್ವೀಕರಿಸಿ ತನ್ನ ಕ್ಷೇತ್ರವನ್ನು ಬಿಟ್ಟು ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಚುನಾವಣೆಗೆ ನಿಂತಿದ್ದರು. ಮಮತಾರಿಗಾಗಿ ಕೃಷಿ ಸಚಿವ ಹಾಗು ಹಿರಿಯ ನಾಯಕ ಶೋಭನ್ ದೇವ್ ಚಟ್ಟೋಪಾಧ್ಯಾಯ ಶಾಸಕ ಸ್ಥಾನ ತ್ಯಜಿಸಿದ್ದರು.

ರಾಜ್ಯದಲ್ಲಿ ಆಡಳಿತ ಬಿಕ್ಕಟ್ಟು ಇಲ್ಲದಾಗಲು ಉಪಚುನಾವಣೆ ನಡೆಸಬೇಕೆಂದು ರಾಜ್ಯ ಸರಕಾರ ಚುನಾವಣೆ ಆಯೋಗದೊಂದಿಗೆ ಆಗ್ರಹಿಸಿತ್ತು. ಮೇ ತಿಂಗಳಲ್ಲಿ ಉಪ ಚುನಾವಣೆ ನಡೆಯಲಿದೆ.