ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ವಿವಾದಿತ ಪ್ರಶ್ನೆಗಳನ್ನು ಹಾಗೆಯೆ ಇಟ್ಟು ಕೊಂಡು ಹೊಸ ಜನಸಂಖ್ಯಾ ರಿಜಿಸ್ಟರ್ ಫಾರಮ್(ಎನ್ಪಿಆರ್) ನವೀಕರಿಸಲಾಗಿದೆ. ಮಾತೃಭಾಷೆ, ತಂದೆ-ತಾಯಿ ಹುಟ್ಟಿದ ಸ್ಥಳ, ಕೊನೆಗೆ ವಾಸವಿದ್ದ ಸ್ಥಳ ಮುಂತಾದ ಪ್ರಶ್ನೆಗಳು ಎನ್ಪಿಆರ್ ಫಾರಂನಲ್ಲಿ ಪುನಃ ಕೇಳಲಾಗಿದೆ. ರಿಜಿಸ್ಟರ್ ಜನರಲ್ ಅಧೀನದ ಸಮಿತಿ ಇದನ್ನು ತಯಾರಿಸಿ ಜಿಲ್ಲಾ ಸೆನ್ಸಸ್ ಅಧಿಕಾರಿಗಳಿಗೆ ಕೊಟ್ಟಿದೆ.
2019ರಲ್ಲಿ 30 ಲಕ್ಷ ಮಂದಿಯಲ್ಲಿ ಪರೀಕ್ಷಾರ್ಥ ಮಾಡಿದ ಸಮೀಕ್ಷೆಯಲ್ಲಿ ವಿವಾದಿತ ಪ್ರಶ್ನೆಗಳಿದ್ದುವು. ಅಂದು ಇದನ್ನು ಕೆಲವು ರಾಜ್ಯಗಳು ಮತ್ತು ಪೌರಹಕ್ಕು ಸಂಘಟನೆಗಳು ವಿರೋಧಿಸಿದ್ದವು. ಹೆಚ್ಚು ವಿವಾದ ಸೃಷ್ಟಿಸಿದ ರಾಷ್ಟ್ರೀಯ ಪೌರತ್ವ ಪಟ್ಟಿಯ ಮೊದಲ ಹಂತ ಎನ್ಪಿಆರ್ ಎಂದು ಸಂಘಟನೆಗಳು ಬೆಟ್ಟು ಮಾಡಿ ತೋರಿಸಿದವು. ತಂದೆ-ತಾಯಿ ಭಾರತದವರು ಆದರೆ ಅವರು ಹುಟ್ಟಿದ ಸ್ಥಳ, ಜಿಲ್ಲೆ, ಅಲ್ಲದಿದ್ರೆ ದೇಶದ ಹೆಸರು ಪ್ರಶ್ನೆಗಳಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಹದಿನಾಲ್ಕು ವಿವರಗಳನ್ನು ಕೇಳಲಾಗುತ್ತಿದೆ.












