ಪೆಟ್ರೋಲ್-ಡೀಸೆಲ್ ದುಬಾರಿ: ಫ್ಲೆಕ್ಸ್ ಫ್ಯೂಲ್‍ ಬಳಕೆಗೆ ಮುಂದಾದ ಕೇಂದ್ರ ಸರಕಾರ

0
625

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳದ ಬಿಕ್ಕಟ್ಟು ದಾಟಲು ಫ್ಲೆಕ್ಸ್ ಫ್ಯೂಲ್‍ ಬಳಕೆಗೆ ಸರಕಾರ ಮುಂದಾಗಿದೆ. ಫ್ಲೆಕ್ಸ್ ಇಂಧನ ಉಪಯೋಗಿಸುವ ವಾಹನ ಇಂಜಿನ್ ನಿರ್ಮಿಸಲು ಕಂಪೆನಿಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ ಎಂಬುದಾಗಿ ವರದಿಯಾಗಿದೆ. ಸುಪ್ರೀಂ ಕೋರ್ಟಿನಿಂದ ಹಸಿರು ನಿಶಾನೆ ಸಿಕ್ಕಿದ ಕೂಡಲೇ ಇದಕ್ಕೆ ಕ್ರಮ ಜರಗಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

ಪೆಟ್ರೋಲ್ ಡೀಸೆಲ್ ಜೊತೆಗೆ ಎಥೆನಾಲ್ ಬಳಸುವ ಫ್ಲೆಕ್ಸ್ ಫ್ಯೂಯಲ್ ವಾಹನಗಳು ಬ್ರೆಝಿಲ್, ಸ್ವೀಡನ್, ಜರ್ಮನಿಗಳಲ್ಲಿ ವ್ಯಾಪಕ ಬಳಕೆಗೊಳ್ಳುತ್ತಿದೆ. ಎಥೆನಾಲ್ ಅರ್ಥ ವ್ಯವಸ್ಥೆ ನಿರ್ಮಿಸುವುದು ಸರಕಾರದ ಯತ್ನ ಎಂದು ಗಡ್ಕರಿ ಹೇಳಿದರು.

ಎಲ್ಲ ವಾಹನ ನಿರ್ಮಿಸುವ ಕಂಪೆನಿಗಳು ಫ್ಲೆಕ್ಸ್ ಫ್ಯೂಲ್ ಇಂಜಿನ್‍ಗಳನ್ನು ನಿರ್ಮಿಸುವಂತೆ ಆಗ್ರಹಿಸಲಾಗುವುದು ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಇದಕ್ಕೆ ಬೇಕಾಗಿ ಅಫಿದಾವಿತ್ ಸಲ್ಲಿಸಲಾಗಿದೆ. ಕೋರ್ಟಿನಿಂದ ತೀರ್ಮಾನವಾದರೆ ಮುಂದಿನ ಕ್ರಮದೊಂದಿಗೆ ಮುಂದುವರಿಯುತ್ತೇವೆ ಎಂದು ಅವರು ಹೇಳಿದರು.