ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಹಿಂದುತ್ವ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಗುಡ್ಗಾವ್ನಲ್ಲಿ ನಮಾಝ್ ಸ್ಥಳಗಳಲ್ಲಿ ನಮಾಝ್ಗೆ ನೀಡಿದ ಅನುಮತಿಯನ್ನು ಜಿಲ್ಲಾಡಳಿತ ಹಿಂಪಡೆದಿದೆ. ಶುಕ್ರವಾರ ಪ್ರಾರ್ಥನೆಗಾಗಿ 37 ಸ್ಥಳಗಳಲ್ಲಿ ಅನುಮತಿ ಇತ್ತು. ಈಗ ಎಂಟು ಕಡೆ ನಮಾಝ್ ಅನುಮತಿ ರದ್ದುಪಡಿಸಿದೆ.
ಹಿಂದುತ್ವ ಸಂಘಟನೆಗಳ ನೇತೃತ್ವದಲ್ಲಿ ನಮಾಝ್ ಮಾಡುವ ಸ್ಥಳದಲ್ಲಿ ಪ್ರತಿಭಟನೆ ನಡೆದ ಹಿನ್ನೆಲೆಯಿಂದ ಜಿಲ್ಲಾಡಳಿತ ಈ ತೀರ್ಮಾನಕ್ಕೆ ಬಂದಿದೆ. ನಮಾಝನ್ನು ಮಸೀದಿ, ಈದ್ಗಾಹ್ ಅಥವಾ ಖಾಸಗಿ ಜಾಗದಲ್ಲಿ ಮಾಡಿ ಎಂದು ಜಿಲ್ಲಾಡಳಿತ ತಿಳಿಸಿತು. ಶುಕ್ರವಾರ ನಮಾಝ್ ನಡೆಯುವ ಇತರ ಕಡೆಯಲ್ಲಿ ಪ್ರತಿಭಟನೆ ಆದರೆ ಅನುಮತಿ ರದ್ದು ಮಾಡುವುದಾಗಿ ಕೂಡ ಜಿಲ್ಲಾಡಳಿತ ಹೇಳಿದೆ.
ಕೆಲವು ದಿನಗಳ ಹಿಂದೆ ಜುಮಾ ನಮಾಜ್ ತಡೆಯುವುದಕ್ಕೆ ಯತ್ನಿಸಿದ 30 ಮಂದಿಯ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ವಿವಿಧ ಹಿಂದೂ ಸಂಘಟನೆಗಳವರು ಜುಮಃ ನಮಾಝ್ ಅಡ್ಡಿಪಡಿಸಲು ಮುಂದೆ ಬಂದಿದ್ದಾರೆ. ಗುರುಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವುದನ್ನು ಪ್ರಶ್ನಿಸಿದ್ದರು.
ಗುರುಗ್ರಾಮದ 37 ಸಾರ್ವಜನಿಕ ಸ್ಥಳಗಳಲ್ಲಿ ಶುಕ್ರವಾರ ನಮಾಝ್ ಮಾಡುವ ಸೌಕರ್ಯವನ್ನು 2018ರಲ್ಲಿ ಜಿಲ್ಲಾಡಳಿತ ಮಾಡಿಕೊಟ್ಟಿತು. ಅಂದಿನಿಂದ ನಮಾಝ್ ತಡೆಯುವ ಯತ್ನಗಳು ಮುಂದುವರಿಯುತ್ತಾ ಬಂದಿವೆ. ಆದುದರಿಂದ ಸೆಕ್ಟರ್ 12ರಲ್ಲಿ ನಮಾಝ್ ಪೊಲೀಸರ ಸುರಕ್ಷೆಯ ನಡುವೆ ನಡೆಯುತ್ತಿತ್ತು. ಆದರೆ ಜೈಶ್ರೀರಾಂ, ಭಾರತ್ ಮಾತಾಕಿ ಜೈ ಘೋಷಣೆಯೊಂದಿಗೆ ಹಿಂದುತ್ವ ಸಂಘಟನೆಗಳು ಒಟ್ಟು ಸೇರಿದ್ದರು. ನಂತರ 30 ಮಂದಿಯ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ.
ಎರಡು ವರ್ಷಗಳಿಂದ ಗುರುಗ್ರಾಮದ ನಿರ್ದಿಷ್ಟ ಸ್ಥಳಗಳಲ್ಲಿ ಮುಸ್ಲಿಮರು ಶುಕ್ರವಾರದ ನಮಾಝ್ ಮಾಡುತ್ತಿದ್ದಾರೆ. ಅಂದಿನಿಂದಲೇ ತಡೆಯುವ ಪ್ರಯತ್ನವೂ ಆರಂಭವಾಗಿತ್ತು.












