ಚೀನಾದಲ್ಲಿ ಮೂರು ತಿಂಗಳಲ್ಲೇ ಅತಿ ಹೆಚ್ಚು ಕೊರೋನ ಪ್ರಕರಣಗಳು ವರದಿ: ಕಠಿಣ ನಿಯಂತ್ರಣ ಹೇರಿಕೆ

0
371

ಸನ್ಮಾರ್ಗ ವಾರ್ತೆ

ಬೀಜಿಂಗ್: ಚೀನದಲ್ಲಿ ಪ್ರತಿದಿನ ಕೊರೋನ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮೂರು ತಿಂಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿತು. ಕಠಿಣ ನಿಯಂತ್ರಣಕ್ಕೆ ಚೀನಾ ಸರಕಾರ ಮುಂದಾಗುತ್ತಿದೆ ಎಂಬುದಾಗಿ ವರದಿಯಾಗಿದೆ. ಬೀಜಿಂಗಿನಲ್ಲಿ ಮುಂದಿನವಾರ ಕಮ್ಯೂನಿಸ್ಟ್ ಪಾರ್ಟಿ ಸಭೆ ನಡೆಯುತ್ತಿದ್ದು ಸಭೆಯಿಂದ ಹೆಚ್ಚಿನ ನಿಯಂತ್ರಣ ಘೋಷಣೆಯಾಗಲಿದೆ.

ರಾಷ್ಟ್ರೀಯ ಆರೋಗ್ಯ ಆಯೋಗದ ದತ್ತಾಂಶಗಳ ಪ್ರಕಾರ ಬುಧವಾರ 93 ಮಂದಿಗೆ ಕೊರೋನ ಸೋಂಕು ತಗುಲಿದೆ. ಆಗಸ್ಟ್ ಒಂಬತ್ತರ ನಂತರ ಚೀನದಲ್ಲಿ ಅತ್ಯಂತ ಗರಿಷ್ಠ ಕೊರೋನ ಪ್ರಕರಣಗಳು ಕಂಡು ಬಂದಿವೆ. ಚೀನಕ್ಕೆ ಸ್ಥಳೀಯರಿಂದಲೇ ಕೊರೋನ ಹರಡುವುದು ಆತಂಕಕ್ಕಿಟ್ಟುಕೊಂಡಿದೆ.

ರೋಗದ ಹಾವಳಿ ಹೆಚ್ಚಿದರಿಂದ ಶಾಪಿಂಗ್ ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳು, ಹೊಟೇಲು, ಸಿನೆಮಾಗೃಹಗಳು, ಸಬ್‍ವೇ ಸ್ಟೇಶನ್‍ಗಳಲ್ಲಿ ಕಠಿಣ ನಿಯಂತ್ರಣ ಜಾರಿಗೊಳಿಸಲಾಗಿದೆ. ನಗರದಿಂದ ಹೊರಗೆ ಹೋಗುವಂತಿಲ್ಲ ಎಂದು ಬೀಜಿಂಗ್‌ನ ನಿವಾಸಿಗಳಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಮದುವೆ ಕಾರ್ಯಕ್ರಮಗಳನ್ನು ಮುಂದೂಡಲಾಗಿದ್ದು, ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಸ್ವಲ್ಪ ಮಂದಿ ಇದ್ದರೆ ಸಾಕು ಎಂಬ ನಿರ್ಬಂದನೆ ಹೇರಲಾಗಿದೆ. ಬಿಜಿಂಗ್‍ನ ಡಾಕ್ಸಿಂಗ್ ವಿಮಾನ ನಿಲ್ದಾಣದಿಂದ 60 ಶೇಕಡಾ ವಿಮಾನ ಯಾನ ರದ್ದಪಡಿಸಲಾಗಿದೆ.