ಕೊರೋನ ವ್ಯಾಕ್ಸಿನ್ ತೆಗೆದುಕೊಳ್ಳದ ಸಿಬ್ಬಂದಿಗಳಿಗೆ ಸಂಬಳವಿಲ್ಲ: ಕಾರ್ಪೊರೇಷನ್ ಸುತ್ತೋಲೆ

0
309

ಸನ್ಮಾರ್ಗ ವಾರ್ತೆ

ಮುಂಬೈ: ನೌಕರರು ಲಸಿಕೆ ಹಾಕಿಸದಿದ್ದರೆ ಸಂಬಳ ಕೊಡುವುದಿಲ್ಲ ಎಂದು ಥಾಣೆ ಕಾರ್ಪೊರೇಷನ್ ಘೋಷಿಸಿದ್ದು ಮೊದಲ ಡೋಸ್ ವಾಕ್ಸಿನ್ ಪಡೆದುಕೊಳ್ಳದವರಿಗೆ ಸಂಬಳ ಕೊಡುವುದಿಲ್ಲ ಎಂದು ತಿಳಿಸಿದೆ. ಸೋಮವಾರ ಹಿರಿಯ ಅಧಿಕಾರಿಗಳು, ಮೇಯರ್, ಕಮಿಷನರ್ ನೇತೃತ್ವದಲ್ಲಿ ನಡೆದ ಚರ್ಚೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಮೊದಲ ಡೋಸ್ ವಾಕ್ಸಿನ್ ತೆಗೆದುಕೊಳ್ಳದ ಕಾರ್ಪೊರೇಷನ್ ಉದ್ಯೋಗಿಗಳಿಗೆ ಸಂಬಳ ಕೊಡುವುದಿಲ್ಲ. ಸರಿಯಾದ ಸಮಯದಲ್ಲಿ ಎರಡನೇ ಡೋಸ್ ವ್ಯಾಕ್ಸಿನ್ ತೆಗೆದುಕೊಳ್ಳದವರಿಗೂ ಸಂಬಳ ಕೊಡುವುದಿಲ್ಲ ಇಂದು ಕಾರ್ಪೊರೇಷ್ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ನಾಗರಿಕ ಅಧಿಕಾರಿಗಳು ಅವರ ಮೇಲಾಧಿಕಾರಿಗಳ ಮುಂದೆ ವಾಕ್ಸಿನ್ ಹಾಕಿಸಿದ ಸರ್ಟಿಫಿಕೇಟ್ ಕಡ್ಡಾಯವಾಗಿ ಹಾಜರುಪಡಿಸಬೇಕು. ಈ ತಿಂಗಳು ಕೊನೆಯಲ್ಲಿ ನಗರದ ವ್ಯಾಕ್ಸಿನೇಷನ್ ಪೂರ್ಣ ಮಾಡುವ ಪ್ರಯತ್ನ ಕಾರ್ಪೋರೇಷನ್ ನಡೆಸುತ್ತಿದ್ದು ಮಂಗಳವಾರದಿಂದ ನಗರದಲ್ಲಿ ವ್ಯಾಕ್ಸಿನೇಷನ್‍ ಡ್ರೈವ್ ಆರಂಭಿಸುವುದಾಗಿ ಅದು ತಿಳಿಸಿದೆ.

ಜನರಿಗೆ ವ್ಯಾಕ್ಸಿನ್ ಕುರಿತು ಜಾಗೃತಿ ಮೂಡಿಸುವುದು, ಒಂದು ಡೋಸ್ ತೆಗೆದುಕೊಳ್ಳದವರಿಗೆ ಹಾಗೂ ಎರಡನೆ ಡೋಸ್ ಸರಿಯಾದ ಸಮಯಕ್ಕೆ ಪಡೆದುಕೊಳ್ಳದವರಿಗೆ ಈ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಲಸಿಕೆಯ ಕುರಿತ ಜಾಗೃತಿಗೆ ನಗರದಲ್ಲಿ ವಿವಿಧ ಕಾರ್ಯಕ್ರಮ ಮಾಡುವುದಾಗಿಯೂ ಕಾರ್ಪೋರೇಷನ್ ತಿಳಿಸಿದೆ.