ಓಮಿಕ್ರಾನ್ ಶೀಘ್ರದಲ್ಲೇ ಯುರೋಪಿನ‌ ಅರ್ಧದಷ್ಟು ಕೋವಿಡ್ ಸೋಂಕುಗಳಿಗೆ ಕಾರಣವಾಗಬಹುದು: ಯೂರೋಪಿಯನ್ ಯೂನಿಯನ್

0
246

ಸನ್ಮಾರ್ಗ ವಾರ್ತೆ

ಬ್ರುಝೆಲ್ಸ್: ಕೆಲವು ತಿಂಗಳಲ್ಲಿ ಒಟ್ಟು ಯುರೋಪಿನ ಅರ್ಧಕ್ಕೂ ಹೆಚ್ಚು ಜನರಿಗೆ ಕೊರೋನ ಬಾಧೆ ತಗಲಬಹುದು ಅದಕ್ಕೆ ಒಮಿಕ್ರಾನ್ ರೂಪಾಂತರ ಕಾರಣವಾಗುವುದು ಎಂದು ಯುರೋಪಿಯನ್ ಯೂನಿಯನ್‍ನ ಪಬ್ಲಿಕ್ ಹೆಲ್ತ್ ಏಜೆನ್ಸಿ ತಿಳಿಸಿದೆ. ಇದೇ ವೇಳೆ ಇಲ್ಲಿ ಈ ಪ್ರದೇಶದಲ್ಲಿ ಈವರೆಗೆ ಗಂಭೀರವಾದ ಯಾವುದೇ ರೋಗಗಳು ಕಂಡು ಬಂದಿಲ್ಲ.

ಯುರೋಪಿನಲ್ಲಿ ಹಲವಾರು ಜನರಿಗೆ ಓಮಿಕ್ರಾನ್ ದೃಢಪಟ್ಟಿದೆ. ಭಾರತ,ಅಮೆರಿಕ, ಇಂಗ್ಲೆಂಡ್ ದಕ್ಷಿಣಾಫ್ರಿಕ, ಅಮೆರಿಕ, ಸಿಂಗಾಪುರ ಸಹಿತ30 ದೇಶಗಳಲ್ಲಿ ಒಮಿಕ್ರಾನ್ ವರದಿಯಾಗಿದೆ.

ಡೆಲ್ಟಾದ ಹಿಂದಿನ ರೂಪಾಂತರಗಳಿಗೆ ಹೋಲಿಸಿದರೆ ಶೀಘ್ರಾತಿಶೀಘ್ರದಲ್ಲಿ ಹರಡುವ ಶಕ್ತಿ ಓಮಿಕ್ರಾನ್‌ಗಿದೆ. ಒಮಿಕ್ರಾನ್ ಗಂಭೀರವೂ ಆಗಬಹುದಾಗಿದೆ ಎಂಬುದು ಪ್ರಾಥಮಿಕ ಅಂದಾಜು. ಜನವರಿ ಕೊನೆಯಲ್ಲಿ ಡೆಲ್ಟಾದ ನಂತರ ಓಮಿಕ್ರಾನ್ ಪ್ರಬಲವಾಗುತ್ತದೆ ಎಂದು ಫ್ರೆಂಚ್ ಸರಕಾರ ಹೇಳುತ್ತಿದೆ. ಅಲ್ಲಿನ ವೈಜ್ಞಾನಿಕ ಸಲಹೆಗಾರ ಜಿನ್ ಫ್ರಾಂಕೊಯಿಸ್ ಡೆಲ್‍ಪ್ರಸಿ ಗುರುವಾರ ಹೀಗೆ ಹೇಳಿದ್ದರು.

ಇದೇ ಸಮಯದಲ್ಲಿ ಒಮಿಕ್ರಾನ್‍ನ ಹರಡುವಿಕೆಯ ಪ್ರಬಲ ಸ್ಥಿತಿಗೆ ಈಗ ಸ್ಪಷ್ಟವಾದ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ಹೇಳಿತು. ಇದರ ವಕ್ತಾರ ಮರಿಯವಾನ್ ಕೊರಖೆವ್ ಈ ವಿಚಾರವನ್ನು ತಿಳಿಸಿದರು. ಹೆಚ್ಚಿನ ವಿವರಗಳನ್ನು ಕೆಲವು ದಿನಗಳೊಳಗೆ ಬರಬಹುದೆಂಬ ನಿರೀಕ್ಷೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.