ಡಿಸೆಂಬರ್ 4ರಂದು ಜವಾದ್ ಚಂಡಮಾರುತ; ಒಡಿಸ್ಸಾದಲ್ಲಿ ಕಟ್ಟೆಚ್ಚರ

0
236

ಸನ್ಮಾರ್ಗ ವಾರ್ತೆ

ಭುವನೇಶ್ವರ್: ಜವಾದ್ ಚಂಡಮಾರುತ ಸಾಧ್ಯತೆ ಹಿನ್ನೆಲೆಯಲ್ಲಿ ಒಡಿಸ್ಸ ಕರವಾಳಿಯಲ್ಲಿ ಕಟ್ಟೆಚ್ಚರಕ್ಕೆ ಆಜ್ಞಾಪಿಸಲಾಗಿದೆ. ಒಡಿಸ್ಸದಲ್ಲಿ ಡಿಸೆಂಬರ್ 3ರಿಂದ ಭಾರೀ ಮಳೆ, ಭೂಕುಸಿತ ಸಂಭವಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಡಿಸೆಂಬರ್ 4ರಂದು ಒಡಿಸ್ಸ, ಆಂಧ್ರ ಕರಾವಳಿಯಲ್ಲಿ ಜವಾದ್ ಚಂಡಮಾರುತ ಅಪ್ಪಳಿಸುತ್ತದೆ. ಇದರ ವೇಗ ಗಂಟೆ 80 ಕಿಲೋಮೀಟರ್ ಇರುತ್ತದೆ. ಗಾಳಿಯ ವೇಗ ಗಂಟೆಗೆ 90 ಕಿಲೋ ಮೀಟರ್‌ವರೆಗೂ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಡಿಸ್ಸದ ಗಜಾಪತಿ, ಗಂಜಂ, ಪುರಿ, ಜಗತ್‍ಸಿಂಗ್‍ಪುರ್ ಈ ನಾಲ್ಕು ಜಿಲ್ಲೆಗಳಲ್ಲಿ ಚಂಡಮಾರುತ ಬೆದರಿಕೆ ಇದೆ. ನಾಲ್ಕು ಜಿಲ್ಲೆಗಳಲ್ಲಿ 20ಸೆ.ಮೀ ಮಳೆಯಾಗಬಹುದು. ಒಡಿಸ್ಸದಲ್ಲಿ ಡಿಸೆಂಬರ್ ಐದಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ ಐದು, ಆರಕ್ಕೆ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಲೆಂಡ್ ಮಣಿಪುರದ ಸಹಿತ ಈಶಾನ್ಯ ರಾಜ್ಯಗಳಲ್ಲಿ ಜವಾದ್ ಚಂಡಮಾರುತ ಬೀಸಲಿದೆ.