ದಲಿತ ಮಹಿಳೆ ತಯಾರಿಸಿದಕ್ಕೆ ಮಧ್ಯಾಹ್ನದ ಬಿಸಿಊಟ ಸೇವಿಸಲು ನಿರಾಕರಿಸಿದ ವಿದ್ಯಾರ್ಥಿಗಳು; ಮಹಿಳೆಯನ್ನು ವಜಾಗೊಳಿಸುವಂತೆ ಮೇಲ್ಜಾತಿಯವರಿಂದ ಒತ್ತಡ

0
302

ಸನ್ಮಾರ್ಗ ವಾರ್ತೆ

ಡೆಹ್ರಾಡೂನ್: ಉತ್ತರಖಂಡದಲ್ಲಿ ದಲಿತ ಮಹಿಳೆ ಮಾಡಿದ ಮಧ್ಯಾಹ್ನದ ಊಟವನ್ನು ವಿದ್ಯಾರ್ಥಿಗಳು ಸೇವಿಸಲು ನಿರಾಕರಿಸಿದ್ದಾರೆ. ಪಂಪವತ್ ಜಿಲ್ಲೆಯ ಸ್ಥಳೀಯ ಸರಕಾರಿ ಶಾಲೆಯಲ್ಲಿ ಕಲಿಯುವ ಉನ್ನತ ಜಾತಿಯ ವಿದ್ಯಾರ್ಥಿಗಳು ಊಟ ತಿರಸ್ಕರಿಸಿದರು. ಈ ವಿದ್ಯಾರ್ಥಿಗಳ ರಕ್ಷಕರು ತಮ್ಮ ಮಕ್ಕಳಿಗೆ ದಲಿತ ಮಹಿಳೆ ಆಹಾರ ತಯಾರಿಸುವುದನ್ನು ಪ್ರಶ್ನಿಸಿದ್ದು ದಲಿತ ಮಹಿಳೆಯನ್ನು ಕೆಲಸದಿಂದ ತೆಗೆಯಬೇಕೆಂದು ಆಗ್ರಹಿಸಿದ್ದಾರೆ. ಶಾಲೆಯ ತಯಾರಿಸಿದ ಆಹಾರವನ್ನು ಬಿಟ್ಟು ಮನೆಯಲ್ಲಿ ಮಾಡಿಕೊಟ್ಟ ಆಹಾರವನ್ನು ವಿದ್ಯಾರ್ಥಿಗಳು ತರುತ್ತಿದ್ದಾರೆ. ಶಾಲೆಯಲ್ಲಿ 230 ವಿದ್ಯಾರ್ಥಿಗಳಿದ್ದಾರೆ.

ಡಿಸೆಂಬರ್ 13ಕ್ಕೆ ನಾನು ಶಾಲೆಗೆ ಬಂದೆ. ಅಂದು ಎಲ್ಲ ವಿದ್ಯಾರ್ಥಿಗಳಿಗೂ ನಾನು ಅಡಿಗೆ ಮಾಡಿ ಬಡಿಸಿದ್ದೇನೆ. ಯಾವುದೇ ಸಮಸ್ಯೆ ಇರಲಿಲ್ಲ. ಈಗ ನಾನು ತಯಾರಿಸಿದ ಊಟ ಮಾಡಬಾರದೆಂದು ಇವರಿಗೆ ಇವರ ಮನೆಯವರು ಹೇಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಊಟ ಮಾಡುತ್ತಿಲ್ಲ. ನಾನು ದಲಿತ ಮಹಿಳೆಯಾಗಿದ್ದರಿಂದ ನನ್ನ ನೇಮಕಾತಿಯನ್ನು ಇವರು ಪ್ರಶ್ನಿಸುತ್ತಿದ್ದಾರೆ. ಇದು ತೀವ್ರ ಅಪಮಾನಕರವಾಗಿದೆ ಎಂದು ಅಡುಗೆ ಮಹಿಳೆ ಸುನೀತಾ ಹೇಳಿದರು.

ಸುನೀತಾ ರೋಗಿಯಾದ ಪತಿ ಮತ್ತು ಇಬ್ಬರು ಮಕ್ಕಳ ಪೋಷಣೆಗೆ ಈ ಕೆಲಸವನ್ನು ಮಾಡುತ್ತಿದ್ದಾರೆ. ಸುನೀತಾರ ಮೊದಲು ಉನ್ನತ ಜಾತಿಯ ಒಬ್ಬರು ಮಹಿಳೆ ಇಲ್ಲಿ ಅಡುಗೆಯಾಳಗಿದ್ದರು. ಈಗ ತಾನು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ತಯಾರಿಸುತ್ತಿದ್ದೇನೆ ಎಂದು ಸುನೀತಾ ಹೇಳಿದರು.

ಉತ್ತರಅಖಂಡದಲ್ಲಿ ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನ ದೂಟ ಯೋಜನೆಯಲ್ಲಿ ಅಡಿಗೆ ಮಾಡುವ ಮಹಿಳೆಯರನ್ನು
ಭೋಜನ್ ಮಾತಾಸ್ ಎಂದು ಕರೆಯಲಾಗುತ್ತಿದೆ. ವಿದ್ಯಾರ್ಥಿಗಳಿಗೆ ರುಚಿಕರವಾದ ಆಹಾರ ತಯಾರಿಸುವುದು ಇವರ ಹೊಣೆಗಾರಿಕೆಯಾಗಿದೆ. ಎಂಟು ಲಕ್ಷಕ್ಕೂ ಹೆಚ್ಚು ನಿರುದ್ಯೋಗಿಗಳು ಈ ರಾಜ್ಯದಲ್ಲಿದ್ಧಾರೆ. ಸುನೀತಾರಂತಹವರಿಗೆ ಕೆಲಸ ಸಿಗುವುದೇ ಕಷ್ಟದಾಯಕವಾಗಿದೆ. ಅಡುಗೆ ಮಾಡಿಕೊಡಲು ತಿಂಗಳಿಗೆ ಮೂರು ಸಾವಿರ ರೂಪಾಯಿ ಕೊಡಲಾಗುತ್ತದೆ. 20,000ಕ್ಕೂ ಹೆಚ್ಚು ಮಹಿಳೆಯರು ಭೋಜನ್ ಮಾತಾ ಆಗಿ ದುಡಿಯುತ್ತಿದ್ದಾರೆ. ಹಲವು ಹೆತ್ತವರು ಸುನೀತಾರ ನೇಮಕಾತಿಯನು ವಿರೋಧಿಸಿದ್ದರು ಎಂದು ಶಾಲೆಯ ಪ್ರಿನ್ಸಿಪಾಲ್ ಪ್ರೇಮ್ ಆರ್ಯ ತಿಳಿಸಿದರು.