ಕಾಸರಗೋಡು ಸುಲ್ತಾನ್ ಗೋಲ್ಡ್ ಗೆ 2.88 ಕೋ. ರೂ. ವಂಚಿಸಿ ಪರಾರಿಯಾಗಿದ್ದ ಸಿಬ್ಬಂದಿಯ ಬಂಧನ

0
290

ಸನ್ಮಾರ್ಗ ವಾರ್ತೆ

ಕಾಸರಗೋಡು: ಕಾಸರಗೋಡು ನಗರದ ಪ್ರಖ್ಯಾತ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮೆಂಡ್ಸ್ ಜ್ಯುವೆಲ್ಲರಿಯಿಂದ ಸುಮಾರು 2.88 ಕೋಟಿ ರೂಪಾಯಿ ಮೌಲ್ಯದ ವಜ್ರಾಭರಣಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.‌

ಕಾಸರಗೋಡು ಶೋ ರೂಮ್ ನ ಸಿಬ್ಬಂದಿ, ಬಂಟ್ವಾಳ ಬಿ.ಸಿ.ರೋಡ್ ತಾಳಿಪಡ್ಪು ನಿವಾಸಿ ಮುಹಮ್ಮದ್ ಫಾರೂಕ್ (35), ಬಂಧಿತ ಆರೋಪಿ. ಈತನನ್ನು ಕರ್ನಾಟಕದಿಂದ ಪೊಲೀಸರು ಬಂಧಿಸಿದ್ದಾರೆ. ಜ್ಯುವೆಲ್ಲರಿಯಿಂದ ದೋಚಿದ ಆಭರಣಗಳನ್ನು ಪತ್ತೆ ಹಚ್ಚಲು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಪೊಲೀಸ್ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಕ್ರಿಕೆಟ್ ಆಡಲು ಹೋದ ತನ್ನ ಪತಿ ಯುವಕ ವಾಪಸ್ ಬರದೆ ನಾಪತ್ತೆಯಾಗಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ಫಾರೂಕ್ ಅವರ ಪತ್ನಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಮಧ್ಯೆ ಕಾಸರಗೋಡು ಟೌನ್ ಪೊಲೀಸ್ ಠಾಣೆಯಲ್ಲಿ ಮುಹಮ್ಮದ್ ಫಾರೂಕ್ ವಿರುದ್ಧ ಸುಲ್ತಾನ್ ಜುವೆಲ್ಲರಿಗೆ ಕೋಟ್ಯಾಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ವಂಚನೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

ಸುಮಾರು ಒಂದೂವರೆ ವರ್ಷದಲ್ಲಿ ನೌಕರನಾಗಿದ್ದ ಫಾರೂಕ್ ಸುಮಾರು 2.88 ಕೋಟಿ ರೂಪಾಯಿ ಮೌಲ್ಯದ ವಜ್ರಾಭರಣಗಳನ್ನು ದೋಚಿದ್ದಾನೆ. ಜುವೆಲ್ಲರಿ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭ ಕಳವು ಪ್ರಕರಣ ಬೆಳಕಿಗೆ ಬಂತು ಎಂದು ಪ್ರಕರಣ ದಾಖಲಾಗಿತ್ತು.