ಎಚ್‌ಐಎಫ್ ಕತಾರ್ ವಿಭಾಗದ ನೂತನ ಅಧ್ಯಕ್ಷರಾಗಿ ಶಫಕತ್ ಹುಸೈನ್ ಆಯ್ಕೆ

0
337

ಸನ್ಮಾರ್ಗ ವಾರ್ತೆ

ದೋಹ: ಹೈಲ್ಯಾಂಡ್ ಇಸ್ಲಾಮಿಕ್ ಫಾರಂ, ಕತಾರ್ ವಿಭಾಗದ ನೂತನ ಅಧ್ಯಕ್ಷರಾಗಿ ಶಫಕತ್ ಹುಸೈನ್ ಆಯ್ಕೆಯಾಗಿದ್ದಾರೆ. ಶಹೀಮ್ ಮೊಹಮ್ಮದ್ ಸಂಸ್ಥೆಯ ನೂತನ ಕಾರ್ಯದರ್ಶಿಯಾಗಿ, ಶುಹೇಬ್ ಅಹಮದ್ ಖಜಾಂಜಿಯಾಗಿ ಆಯ್ಕೆಯಾಗಿದ್ದು ದೋಹಾದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ.

ಕಳೆದ ಎರಡು ವರ್ಷಗಳ ಕಾರ್ಯ ಚಟುವಟಿಕೆಗಳನ್ನು ಸಂಸ್ಥೆಯ ಕಾರ್ಯದರ್ಶಿ ಶಹೀಮ್ ಮೊಹಮ್ಮದ್ ಪವರ್ ಪಾಯಿಂಟ್ ಮೂಲಕ ವಿವರಿಸಿದರು. ಕತಾರ್ ಸಂಘ-ಸಂಸ್ಥೆಗಳ ನಾಯಕರು, ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶುಹೇಬ್ ಅಹ್ಮದ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.