ಹಂತ ಹಂತವಾಗಿ ಪುನರಾರಂಭ ಮಾಡುವುದಾಗಿ ತಿಳಿಸಿದ ಉಪಕುಲಪತಿ
ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೊರೋನ ನಿಯಂತ್ರಣದ ಹೆಸರಿನಲ್ಲಿ ಕ್ಯಾಂಪಸ್ ಬಂದು ಮಾಡಿಟ್ಟದ್ದು ಇನ್ನೂ ತೆರೆದಿಲ್ಲ. ಆನ್ ಲೈನ್ ತರಗತಿಗಳು ನಮಗೆ ಸಾಕು. ವಿವಿಯನ್ನು ತೆರೆಯಬೇಕೆಂದು ಆಗ್ರಹಿಸಿ ದಿಲ್ಲಿ ಜಾಮಿಆ ಮಿಲ್ಲಿಯ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಕಳೆದ ಬುಧವಾರ ಕ್ಯಾಂಪಸ್ಸಿನ ಪ್ರವೇಶ ದ್ವಾರದ ಬಳಿ ವಿದ್ಯಾರ್ಥಿ ಸಂಘಟನೆ ಎಸ್‍ಐಒ ನೇತೃತ್ವದಲ್ಲಿ ಪ್ರತಿಭಟನೆ ನಡೆದ ಪರಿಣಾಮ, ಹಂತ ಹಂತವಾಗಿ ಪುನರಾರಂಭ ಮಾಡುವುದಾಗಿ ಉಪಕುಲಪತಿ ನಜ್ಮಾ ಅಖ್ತರ್ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ಕ್ಯಾಂಪಸ್ಸಿನಲ್ಲಿ ಪ್ರವೇಶಿಸಿದ ಬಳಿಕ ಅವರಿಗೆ ಕಷ್ಟ ಆಗದಿರಲಿ ಎಂದು ನಾವು ತಡ ಮಾಡಿದ್ದಾಗಿ ಹೇಳಿರುವ ನಜ್ಮಾ ಅಖ್ತರ್, ದೂರದ ಊರಿನ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಟಿಕೆಟ್ ಬುಕ್ ಮಾಡಬೇಕು. ಆದುದರಿಂದ ಸ್ವಲ್ಪ ಸಮಯಾವಕಾಶ ನೀಡುವುದು ಮುಖ್ಯ ಎಂದಿದ್ದಾರೆ.
ದಂತ ವಿಭಾಗಕ್ಕೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಅಥವಾ ಅದರ ಪರೀಕ್ಷೆಗಳನ್ನು ನಡೆಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ದಂತ ವಿಭಾಗದ ಮೂಲಕವೇ ಹಂತ ಹಂತವಾಗಿ ಪುನರಾರಂಭ ಮಾಡುವುದಾಗಿ ಉಪಕುಲಪತಿ ನಜ್ಮಾ ಅಖ್ತರ್ ಮಾಹಿತಿ ನೀಡಿದ್ದಾರೆ.
ಅಹ್ಮದಾಬಾದ್‌ನ ಐಐಎಂ ಪ್ರಾರಂಭ ಮಾಡಿದ ಬಳಿಕ ಒಮ್ಮೆಗೆ ಉಪನ್ಯಾಸಕರು ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ತಗುಲಿದ್ದನ್ನು ನಜ್ಮಾ ಬೆಟ್ಟು ಮಾಡಿದರು. ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿಭಟನೆಮಾಡಿದುದರಿಂದ ಫೆಬ್ರುವರಿ 17 ಕ್ಕೆ ಕಾಲೇಜು ಆರಂಭಿಸುವುದೆಂದು ಅಧಿಕಾರಿಗಳು ಈಗಾಗಲೇ ತೀರ್ಮಾನಿಸಿದ್ದಾರೆ.













