ಯುವ ವಿದ್ಯಾರ್ಥಿಗಳ ಮುಂದೆ ಕಪ್ಪು ಜಾಕೆಟ್ ಧರಿಸಿ ಕುಳಿತ ರಾಹುಲ್ ಗಾಂಧಿ “ನಾನು ರಾಹುಲ್ ,ನಾನು ಕಾಂಗ್ರೆಸ್ ಅಧ್ಯಕ್ಷ” ಎಂದು ಹೇಳುವ ಮೂಲಕ ತನ್ನನ್ನು ಪರಿಚಯಿಸಿಕೊಳ್ಳುವ ವಿಡಿಯೋದ ಮೂಲಕ ರಾಹುಲ್ ಗಾಂಧಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಎಂಬ ಏಕ ಮುಖ ಪ್ರಕ್ರಿಯೆಗೆ ವಿರುದ್ಧವಾಗಿ “ಅಪನೀ ಬಾತ್ ರಾಹುಲ್ ಗಾಂಧಿ ಕೇ ಸಾಥ್” ಎಂಬ ಸಂವಾದವು ಪ್ರಚುರ ಪಡಿದಿದೆ.
ಯುವಜನರೊಂದಿಗೆ ರಾತ್ರಿಯೂಟದ ವೇಳೆ ಸಂವಾದ ನಡೆಸುವ ರಾಹುಲ್ ಗಾಂಧಿಯವರು ಮೇಲ್ಜಾತಿ ಮೀಸಲಾತಿ, ದಲಿತರ ವಿಚಾರಗಳು, ಲೈಂಗಿಕ ಅಲ್ಪಸಂಖ್ಯಾತರ ಕುರಿತಾದ ನಿಯಮಗಳು ಸೇರಿದಂತೆ ಹಲವಾರು ವಿಷಯಗಳ ಮೇಲೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಾಣಬಹುದು.
“ಚುನಾವಣಾ ಪ್ರಣಾಳಿಕೆ ತಯಾರಿಸುವುದಕ್ಕೂ ಮುನ್ನ ಯುವಜನರ ಹಿತಾಸಕ್ತಿಗಳನ್ನು ಹಾಗೂ ವಿಚಾರಧಾರೆಗಳನ್ನು ಅವರಿಂದಲೇ ಮಾತನಾಡಿ ತಿಳಿದುಕೊಳ್ಳಲು ನಾನಿಲ್ಲಿ ಬಂದಿದ್ದೇನೆ” ಎಂದು ಹೇಳುವ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ.
2014 ರ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಇಂತಹ ಸಂವಾದಗಳನ್ನು ಕೈಗೊಂಡಿದ್ದರಾದರೆ ಅಷ್ಟೇನೂ ಪ್ರಚಾರಪಡೆದಿರಲಿಲ್ಲ. ರಾಹುಲ್ ಗಾಂಧಿಯವರ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಗಂಟೆಗಳಲ್ಲಿಯೇ ವೈರಲ್ ಆಗಿದೆ.












