ಸನ್ಮಾರ್ಗ ವಾರ್ತೆ
ಗುವಾಹಟಿ: ಕಾಶ್ಮೀರ ಫೈಲ್ಸ್ ಸಿನೆಮಾ ವಿಷಯದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ಟೀಕೆ ಮಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಟ್ಯಾಕ್ಸ್ ಫ್ರೀ ಮಾಡಿ ಈ ಹಿಂದೆ ಕೆಲವು ಸಿನೆಮಾಗಳನ್ನು ಕೇಜ್ರಿವಾಲ್ ಪ್ರೋತ್ಸಾಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ದಿಲ್ಲಿ ವಿಧಾನಸಭೆಯಲ್ಲಿ ಕಾಶ್ಮೀರ್ ಫೈಲ್ಸ್ ಸಿನೆಮಾವನ್ನು ಬಿಜೆಪಿ ನಾಯಕರು ಪ್ರೋತ್ಸಾಹಿಸುವುದನ್ನು ಕಟುವಾಗಿ ಟೀಕಿಸಿದ್ದರು. ಕಾಶ್ಮೀರ ಫೈಲ್ಸ್ ಟ್ಯಾಕ್ಸ್ ಫ್ರೀ ಮಾಡುವುದು, ಮಾಡದಿರುವ ಹಕ್ಕು ನಿಮಗಿದೆ. ಆದರೆ, ನಮ್ಮನ್ನು ಅಪಮಾನಿಸುವ ಆಕ್ಷೇಪಿಸುವ ಹಕ್ಕು ನಿಮಗಿಲ್ಲ ಎಂದು ಬಿಸ್ವ ಶರ್ಮ ಹೇಳಿದರು.
ಅರವಿಂದ್ ಕೇಜ್ರಿವಾಲ್ ಹಲವು ಸಿನೆಮಾಗಳಿಗೆ ತೆರಿಗೆ ವಿನಾಯತಿ ನೀಡಿದ್ದಾರೆ. ಆ ಸಿನೆಮಾಗಳು ಯಾಕೆ ಯುಟ್ಯೂಬಿನಲ್ಲಿ ಅಪ್ಲೋಡ್ ಮಾಡಿಲ್ಲ. ಕಾಶ್ಮೀರ ಫೈಲ್ಸ್ ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಲು ಯಾಕೆ ಹೇಳುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ದಿಲ್ಲಿ ವಿಧಾನಸಭೆಯಲ್ಲಿ ಹಿಂದೂಗಳ ಗಾಯದ ಮೇಲೆ ಉಪ್ಪು ಸವರುತ್ತಿದ್ದಾರೆ ಎಂದು ಹಿಮಂತ್ ಶರ್ಮ ಅಭಿಪ್ರಾಯ ವ್ಯಕ್ತಪಡಿಸಿದರು.












