ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಹಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಅವರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ಕೊಡುವ ತೀರ್ಮಾನಕ್ಕೆ ಬರಬೇಕಾದ್ದು ರಾಜ್ಯ ಸರಕಾರಗಳು ಎಂದು ಕೇಂದ್ರ ಸರಕಾರ ಹೇಳಿದೆ. ಈ ವಿಷಯದಲ್ಲಿ ಕೇಂದ್ರದ ಯಾವ ಸಚಿವಾಲಯ ಉತ್ತರಿಸಬೇಕೆಂದು ಅಭಿಪ್ರಾಯಗಳಲ್ಲಿ ಗೊಂದಲ ಇದೆ ಎಂದು ಜಸ್ಟಿಸ್ ಸಂಜಯ್ ಕೌಲ್ ಅಧ್ಯಕ್ಷತೆಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಕೋರ್ಟಿಗೆ ಬರುವ ಮೊದಲೇ ಸರಕಾರದ ಅಫಿದಾವಿತ್ ಮಾಧ್ಯಮಗಳಲ್ಲಿ ಜಡ್ಜ್ಗಳು ನೋಡಲು ಸಾದ್ಯವಾಗಿದ್ದು ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಶೇಷ ಎಂದು ಪೀಠ ಟೀಕಿಸಿತು.
ಬಿಜೆಪಿ ನಾಯಕ, ವಕೀಲ ಅಶ್ವಿನಿ ಕುಮಾರ್ ಶರ್ಮರ ಅರ್ಜಿಯಲ್ಲಿ ಸರಕಾರದ ಉತ್ತರ ಮಾಧ್ಯಮಗಳಲ್ಲಿ ಬಂದಿದೆ. ಅವರು ಕೆಲವು ಈಶಾನ್ಯ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಅವರಿಗೆ ಅಲ್ಲಿ ಅಲ್ಪಸಂಖ್ಯಾತರ ದರ್ಜೆ ಕೊಡಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಆಗ್ರಹಿಸಿದ್ದರು. ಆದರೆ, ಇವರು ಜಂತರ್ ಮಂತರ್ನಲ್ಲಿ ಮುಸ್ಲಿಮರ ಮೇಲೆ ಜನಾಂಗೀಯ ದಾಳಿ ನಡೆಸುವ ಕುರಿತು ಕಾರ್ಯಕ್ರಮ ಆಯೋಜಿಸುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಮಿಝೋರಂ, ನಾಗಲ್ಯಾಂಡ್, ಮೇಘಾಲಯ, ಅರುಣಾಚಲ, ಮಣಿಪುರದಲ್ಲಿ ಹಿಂದೂಗಳ ಜನ ಸಂಖ್ಯೆ ಕಡಿಮೆ ಇದ್ದು, ಅವರಿಗೆ ಅಲ್ಪಸಂಖ್ಯಾತರ ದರ್ಜೆ ಕೊಡಬೇಕೆಂದು ಅಶ್ವಿನಿ ಕುಮಾರ ವಾದಿಸಿದ್ದಾರೆ. ಆದರೆ,ಈ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರಕಾರ ಇರುವುದು ವಿಪರ್ಯಾಸ.












