ಸನ್ಮಾರ್ಗ ವಾರ್ತೆ
ಜರ್ಮನಿ: ಗೋಧಿ ರಫ್ತುಗಳನ್ನು ನಿಷೇಧಿಸುವ ಭಾರತದ ನಿರ್ಧಾರವನ್ನು ಗ್ರೂಪ್ ಆಫ್ ಸೆವೆನ್ ರಾಷ್ಟ್ರದ ಕೃಷಿ ಮಂತ್ರಿಗಳು ಖಂಡಿಸಿದ್ದಾರೆ.
‘ಎಲ್ಲ ದೇಶಗಳೂ ರಫ್ತು ನಿಷೇಧ ಜಾರಿಗೆ ತಂದರೆ ಅಥವಾ ತಮ್ಮ ಮಾರುಕಟ್ಟೆಯ ಬಾಗಿಲು ಮುಚ್ಚಿದರೆ ಪರಿಸ್ಥಿತಿ ಬಿಗಡಾಯಿಸುತ್ತದೆ’ ಎಂದು ಜರ್ಮನಿಯ ಕೃಷಿ ಸಚಿವ ಜೆಮ್ ಒಜ್ಡಿಮಿರ್ ಹೇಳಿದರು.
2 ಕೋಟಿ ಟನ್ ಗೋಧಿ ಈಗ ಉಕ್ರೇನ್ನಲ್ಲಿ ಇದೆ. ಆದರೆ ಅಲ್ಲಿನ ಬಂದರುಗಳಿಂದ ರಫ್ತು ಮಾಡಲು ಆಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಜಿ–7 ದೇಶಗಳ ಸಚಿವರು ಇತರ ದೇಶಗಳಿಗೆ ನಿರ್ಬಂಧಗಳನ್ನು ವಿಧಿಸದಂತೆ ಮನವಿ ಮಾಡಿದ್ದಾರೆ.
‘ಜಿ–7 ದೇಶಗಳು ರಫ್ತು ನಿಷೇಧಗಳ ವಿರುದ್ಧ ಮಾತನಾಡಿವೆ. ಮಾರುಕಟ್ಟೆಗಳನ್ನು ಮುಕ್ತವಾಗಿ ಇರಿಸಬೇಕು ಎಂದೂ ಹೇಳಿವೆ’ ಎಂದು ಒಜ್ಡಿಮಿರ್ ತಿಳಿಸಿದ್ದಾರೆ. ‘ಜಿ–20 ಗುಂಪಿನ ಸದಸ್ಯ ದೇಶವಾಗಿರುವ ಭಾರತವು ತನ್ನ ಪಾತ್ರ ನಿಭಾಯಿಸಬೇಕು’ ಎಂದವರು ಆಗ್ರಹಿಸಿದ್ದಾರೆ.
ಜೂನ್ನಲ್ಲಿ ಜರ್ಮನಿಯಲ್ಲಿ ನಡೆಯಲಿರುವ ಜಿ–7 ಶೃಂಗ ಸಭೆಯಲ್ಲಿ ಗೋಧಿ ರಫ್ತು ನಿಷೇಧದ ಬಗ್ಗೆ ಚರ್ಚಿಸಲು ಕೃಷಿ ಸಚಿವರು ಮುಂದಾಗಿದ್ದಾರೆ. ಈ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ಇದೆ.
ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ಭಾರತ. ಕಡಿಮೆ ಗೋಧಿ ಉತ್ಪಾದನೆ ಮತ್ತು ಯುದ್ಧದ ಕಾರಣದಿಂದಾಗಿ ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ಅಂಶಗಳು ಈಗ ತನ್ನದೇ ಆದ “ಆಹಾರ ಭದ್ರತೆ” ಬಗ್ಗೆ ಚಿಂತಿಸುತ್ತಿದೆ ಎಂದು ಹೇಳಿದರು.
ಆಕ್ರಮಣಕ್ಕಿಂತ ಮೊದಲು, ಉಕ್ರೇನ್ ತನ್ನ ಬಂದರುಗಳ ಮೂಲಕ ತಿಂಗಳಿಗೆ 4.5 ಮಿಲಿಯನ್ ಟನ್ಗಳಷ್ಟು ಕೃಷಿ ಉತ್ಪನ್ನಗಳನ್ನು ರಫ್ತು ಮಾಡಿದೆ. ಅದರಲ್ಲಿ ಗೋಧಿ 12 ಪ್ರತಿಶತ, ಜೋಳವು 15 ಪ್ರತಿಶತ ಇತ್ತು ಎಂದು ಒಜ್ಡಿಮಿರ್ ಹೇಳಿದರು.












