ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿದ ಅಲ್ಪಾವಧಿ ಸೈನಿಕ ನೇಮಕಾತಿ ಯೋಜನೆ ‘ಅಗ್ನಿಪಥ್’ ವಿರುದ್ಧ ಸಲ್ಲಿಕೆಯಾದ ಅರ್ಜಿಯಗಳನ್ನು ಶುಕ್ರವಾರ ಸುಪ್ರೀಂ ಕೋರ್ಟು ವಿಚಾರಣೆಗೆತ್ತಿಕೊಳ್ಳಲಿದೆ. ಜುಲೈ 15ರಂದು ಅರ್ಜಿಗಳು ವಿಚಾರಣೆಗೆ ಬರಲಿದ್ದು ಡಿ.ವೈ. ಚಂದ್ರಚೂಡ, ಎ.ಎಸ್.ಬೋಪಣ್ಣ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ಕಳೆದ ಜೂನ್ನಲ್ಲಿ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರಕಾರ ಘೋಷಿಸಿತ್ತು. ಮಹಿಳೆಯರ ಸಹಿತ ನಾಲ್ಕು ವರ್ಷದ ಸೇನಾ ನೇಮಕಾತಿಯ ಯೋಜನೆ ಇದು. ಇದರಲ್ಲಿ ಶೇ.25ರಷ್ಟು ಮಂದಿಯನ್ನು ಮಾತ್ರ ಸೇವೆಯಲ್ಲಿ ಉಳಿಸಿಕೊಂಡು 75% ಜನರನ್ನು ಕೈಬಿಡಲಾಗುವುದು ಎಂದು ಘೋಷಿಸಿದ ಬೆನ್ನಿಗೆ ದೇಶದಲ್ಲಿ ಪ್ರತಿಭಟನೆ ಬಲಗೊಂಡು ಕೆಲವು ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು.
ಅಗ್ನಿಪಥ್ ವಿರೋಧಿಸಿ ಸುಪ್ರೀಂ ಕೋರ್ಟಿನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.












