ಕಸದ ಗಾಡಿಯಲ್ಲಿ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ: ಪೌರ ಕಾರ್ಮಿಕ ವಜಾ

0
448

ಸನ್ಮಾರ್ಗ ವಾರ್ತೆ

ಲಕ್ನೊ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ಫೋಟೊಗಳು ಕಸದ ರಾಶಿಯಲ್ಲಿದ್ದು ಅದನ್ನು ಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆದ ಬೆನ್ನಲ್ಲೇ ಶುಚೀಕರಣ ಕಾರ್ಮಿಕನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಉತ್ತರಪ್ರದೇಶದ ಮಥುರಾದಲ್ಲಿ ನಗರ ನಿಗಮ್ ಮುನ್ಸಿಪಲ್ ಕಾರ್ಪೊರೇಷನ್ ಶುಚೀಕರಣ ಗುತ್ತೆ ಕಾರ್ಮಿಕನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಮುನ್ಸಿಪಲ್ ಕಮಿಷನರ್ ಸತ್ಯೇಂದ್ರ ಕುಮಾರ್ ತಿವಾರಿ ಹೇಳಿದ್ದಾರೆ.

ಆದರೆ ಶುಚೀಕರಣ ಕಾರ್ಮಿಕ ಇವೆಲ್ಲ ಚಿತ್ರಗಳು ಕಸದಲ್ಲಿದ್ದವು ಎಂದು ತಿಳಿಸಿದ್ದಾನೆ. ಕಸವನ್ನು ಈತ ತಳ್ಳುಗಾಡಿಯಲ್ಲಿ ಕೊಂಡು ಹೋಗುತ್ತಿದ್ದ. ಈ ವೀಡಿಯೊವನ್ನು ಪತ್ರಕರ್ತ ಪಿಯೂಷ್ ರಾಯ್ ಟ್ವೀಟ್ ಮಾಡಿದ್ದರು. ಚಿತ್ರಗಳ ಬಗ್ಗೆ ಕೇಳಿದಾಗ ಅದು ಯಾರೆಂದು ತನಗೆ ಗೊತ್ತಿಲ್ಲ ಎಂದು ಶುಚೀಕರಣ ಕಾರ್ಮಿಕ ಹೇಳಿದ್ದ. ಕಸಗಳ ನಡುವೆ ಯೋಗಿ ,ಮೋದಿ ಪೋಟೊ ಇದ್ದುದರಿಂದ ಅದನ್ನು ಕೊಂಡು ಹೋದ ಕಾರಣಕ್ಕೆ ಈತ ಕೆಲಸ ಕಳಕೊಂಡಿದ್ದಾನೆ. ನಂತರ ಇನ್ನೊಬ್ಬ ವ್ಯಕ್ತಿ ಕಸದಿಂದ ಯೋಗಿ, ಮೋದಿಯವರ ಫೋಟೊ ಹೊರತೆಗೆದು ಶುಚೀಕರಿಸುತ್ತಿರುವ ವೀಡಿಯೊ ಕೂಡ ಹೊರಬಂದಿದೆ.