ಫೋನ್ ಪೇ ಕಂಪನಿಯ ಕ್ಯೂಆರ್ ಕೋಡ್‌ಗಳಿಗೆ ಬೆಂಕಿ ಹಾಕಿ ನಷ್ಟ: ಪೇಟಿಎಂ ಉದ್ಯೋಗಿಗಳ ವಿರುದ್ಧ ದೂರು

0
451

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(ಯುಪಿಐ)ನ ಬೃಹತ್ ಕಂಪನಿಯಾದ ಫೋನ್ ಪೇ ತನ್ನ ಪ್ರತಿಸ್ಪರ್ಧಿ ಪೇಟಿಎಂ ಮತ್ತು ತನ್ನ ಕಂಪನಿಯ ಮಾಜಿ ಉದ್ಯೋಗಿಗಳ ವಿರುದ್ಧ ದೂರು ದಾಖಲಿಸಿದೆ.

ಫೋನ್ ಪೇನ ಕ್ಯೂಆರ್ ಕೋಡ್‌ಗಳನ್ನು ಸುಟ್ಟುಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆದ ಘಟನೆ ಎನ್ನಲಾಗಿರುವ ಪ್ರಕರಣದಲ್ಲಿ ರಾಶಿ ರಾಶಿ ಕ್ಯೂಆರ್ ಕೋಡ್‌ ಗಳಿಗೆ ಬೆಂಕಿಹಚ್ಚಿ ಸುಟ್ಟು ಹಾಕಿದ ಒಂದು ವಿಡಿಯೋವನ್ನು ಆಧರಿಸಿ ಕಂಪನಿಯು ಸೂರಜ್‌ಪುರ ಲಖನವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಫೋನ್ ಪೇ ಕಂಪನಿ ತಿಳಿಸಿದೆ.

ತನ್ನ ಕ್ಯೂಆರ್ ಕೋಡ್‌ಗಳ ರಾಶಿಯನ್ನು ಸುಟ್ಟುಹಾಕಿದ ವಿಡಿಯೋವನ್ನು ಆಧರಿಸಿ ದೂರು ದಾಖಲಿಸಿದೆ. ಪೇಟಿಎಂ ಏರಿಯಾ ಸೇಲ್ಸ್ ಮ್ಯಾನೇಜರ್ (ಎಎಸ್‌ಎಂ) ಸೇರಿದಂತೆ ಸಾಫ್ಟ್ ಬ್ಯಾಂಕ್ ಬೆಂಬಲಿತ ಪೇಟಿಎಂನ ಮೂವರು ಉದ್ಯೋಗಿಗಳನ್ನು ವಿಡಿಯೋದಲ್ಲಿ ಗುರುತಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಗುರುತಿಸಲಾದ ಮೂವರಲ್ಲಿ ಒಬ್ಬರು ಮಾಜಿ ಫೋನ್ ಪೇ ಉದ್ಯೋಗಿ ಎಂಬುವುದು ಕೂಡ ಬೆಳಕಿಗೆ ಬಂದಿದೆ.

ಇನ್ನೂ ಪೇಟಿಎಂ ಕಂಪನಿ ಘಟನೆಯನ್ನು ಖಂಡಿಸಿದ್ದು, ಈ ಕೃತ್ಯ ಫೋನ್ ಪೇ ಮತ್ತು ಅದರ ಮಾಜಿ ಉದ್ಯೋಗಿಗಳಿಗೆ ಸಂಬಂಧಿಸಿದ್ದು ಎಂದಿದೆ. ಕಂಪನಿಯು ಆರೋಪಿ ಉದ್ಯೋಗಿಗಳನ್ನು ವಿಚಾರಣೆ ಸಲುವಾಗಿ ಅಮಾನತು ಮಾಡಿದೆ” ಎಂದಿದೆ.