ಸನ್ಮಾರ್ಗ ವಾರ್ತೆ
ದುಬೈ: ಸಾಮಾಜಿಕ ಕಾರ್ಯ ಕ್ಷೇತ್ರಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಕಳೆದ ಹಲವಾರು ವರ್ಷಗಳಿಂದ ಯುಎಇಯಲ್ಲಿ ಪ್ರತಿವರ್ಷ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿರುವ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕರ್ನಾಟಕ ಸಮಿತಿಯು ಸೆಪ್ಟೆಂಬರ್ 04ರಂದು ಮರ್ಹೂಮ್ ರಫೀಕ್ ಆತೂರ್ ರವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು ಲತೀಫಾ ಹಾಸ್ಪಿಟಲ್ ರಕ್ತದಾನ ಕೇಂದ್ರ ಓದ್ ಮೇತಾದಲ್ಲಿ ಬೆಳಿಗ್ಗೆ 10.00 ರಿಂದ ಸಂಜೆ 3.00 ಗಂಟೆ ವರೆಗೆ ಆಯೋಜಿಸಿದೆ.
ಅನಿವಾಸಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ, ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ರಕ್ಷಣೆಯಲ್ಲಿ ಭಾಗಿಯಾಗುವಂತೆ ಎಸ್ ಕೆ ಎಸ್ ಎಸ್ ಎಫ್ ಯು ಎ ಇ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಲ್ ಕೋಲ್ಪೆ, ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕರ್ನಾಟಕ ಸಮಿತಿ ಚೇರ್ಮೆನ್ ನವಾಝ್ ಬಿಸಿ ರೋಡ್, ರಕ್ತದಾನ ಶಿಬಿರ ಛೇರ್ಮನ್ ಜಲೀಲ್ ಶಾನ್ ವಿಟ್ಲ, ಉಸ್ತುವಾರಿ ಸದಸ್ಯರಾದ ಇಸಾಕ್ ಕುಡ್ತಮೊಗೇರ್, ನಿಯಾಝ್ ಕರಾಯ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿರುತ್ತಾರೆ.












