ರಾಮನಗರ: ಎಚ್‌.ಆರ್.ಎಸ್ ಮತ್ತು ಲಯನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

0
171

ಸನ್ಮಾರ್ಗ ವಾರ್ತೆ

ರಾಮನಗರ: ಕಣ್ಣು ದೇಹದ ಅತ್ಯಂತ ಪ್ರಮುಖವಾದ ಅಂಗವಾಗಿದೆ ಇದು ಸೃಷ್ಟಿಕರ್ತನ ಮಹಾ ಅನುಗ್ರಹವಾಗಿದೆ. ಸೃಷ್ಟಿಕರ್ತನ ಅನುಗ್ರಹದ ಬಗ್ಗೆ ಅರಿಯಲು ನಮ್ಮ ಕಣ್ಣಿನ ಬಗ್ಗೆ ಚಿಂತನ ಮಂಥನ ನಡೆಸಿದರೆ ಎಲ್ಲಾ ಧರ್ಮದ ಮೂಲಭೂತ ವಿಶ್ವಾಸದಲ್ಲಿ ಒಳಿತಿದೆ. ಆದ್ದರಿಂದ ನಾವು ಪರಸ್ಪರ ಅರಿತು ಬೆರೆತು ಬಾಳಬೇಕು. ಆಗ ನಮ್ಮ ದೇಶ ಪ್ರಗತಿಯನ್ನು ಸಾಧಿಸುತ್ತದೆ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್‌ನ ಸೇವಾ ಚಟುವಟಿಕೆಗಳು ಅಭಿನಂದನಾರ್ಹವೆಂದು ಹೆಚ್.ಆರ್.ಎಸ್ ಇದರ ನಿರ್ದೇಶಕರಾದ ಕೆ.ಎಂ.ಅಶ್ರಫ್ ಸಾಹಬ್ ಹೇಳಿದರು.

ಅವರು ಇತ್ತೀಚೆಗೆ ರಾಮನಗರದಲ್ಲಿ ಎಚ್ ಆರ್ ಎಸ್ ಮತ್ತು ಲಯನ್ಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣು ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲಯನ್ಸ್ ಕ್ಲಬ್‌ನ ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾಕ್ಟರ್ ನಾಗರಾಜ್ ಬೈರಿ ಯವರು ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲಯನ್ಸ್ ಸಂಸ್ಥೆಯ ರಾಮನಗರದ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಸಾಹಬ್ ರವರು  ರಾಮನಗರದ ನೆರೆ ಸಂಕಷ್ಟದ ಸಂದರ್ಭದಲ್ಲಿ ಹೆಚ್ ಆರ್ ಎಸ್ ನ ಸೇವಾ ಚಟುವಟಿಕೆಯನ್ನು ಕೊಂಡಾಡಿದರು. ಸುಮಾರು 150 ಕನ್ನಡಕಗಳನ್ನು ಅರ್ಹರಿಗೆ ವಿತರಿಸಲಾಯಿತು. ಸುಮಾರು 250ಕ್ಕೂ ಹೆಚ್ಚು ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದರು.

ವೇದಿಕೆಯಲ್ಲಿ, ಎಚ್ ಆರ್ ಎಸ್‌ನ ಹೊಣೆಗಾರರಾದ ಮಹಮ್ಮದ್ ಮರಕಡ, ಫಾರೂಕ್ ನಶ್ಚರ್ ಹಾಗೂ ಅಮೀರ್ ಸಿದ್ದಿಕಿ, ವಾಹಿದ್ ಪಾಷಾ, ಲಾವಣ್ಯ ಡಿ.ಸಿ, ಹೆಚ್ ವಿ ಶೇಷಾದ್ರಿ ಅಯ್ಯರ್, ಶಫಿ ಅಹಮದ್ ಪಾಶ, ರಿಯಾಜ್ ಅಹಮದ್, ಶಬ್ಬೀರ್ ಅಹ್ಮದ್, ಮಹಮ್ಮದ್ ಫಿರೋಜ್ ಉಪಸ್ಥಿತರಿದ್ದರು.