“ಇಡೀ ಜಗತ್ತೇ ಭೀತಿಯಲ್ಲಿದೆ”: ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಬಲಪಂಥೀಯ ಬೆನ್-ಗ್ವಿರ್‌ ಗೆಲುವಿಗೆ ಆತಂಕ ವ್ಯಕ್ತಪಡಿಸಿದ ಇಸ್ರೇಲ್ ಅಧ್ಯಕ್ಷ

0
153

ಸನ್ಮಾರ್ಗ ವಾರ್ತೆ

ಇಸ್ರೇಲ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಝಿಯೋನಿಸಮ್ ನ ಪ್ರತಿಪಾದಕ ಮತ್ತು ಕಟ್ಟರ್ ಬಲಪಂಥೀಯನಾಗಿ ಗುರುತಿಸಿಕೊಂಡಿರುವ ಇತಮಾರ್ ಬೆನ್- ಗ್ವಿರ್ ಅವರ ಪಕ್ಷ ಮೂರನೇ ಅತಿದೊಡ್ಡ ಪಕ್ಷವಾಗಿ ಆಯ್ಕೆಯಾಗಿದ್ದು ಅವರು ನೆತನ್ಯಾಹು ಸರಕಾರದಲ್ಲಿ ಸಚಿವರಾಗುವ ಸಾಧ್ಯತೆ ಇದೆ. ಇದೇ ವೇಳೆ ಅವರ ಬಗ್ಗೆ ಇಸ್ರೇಲ್ ಅಧ್ಯಕ್ಷ ಇಸಾಕ್ ಹರ್ ಝೋಗ್ ಭಯ ವ್ಯಕ್ತಪಡಿಸಿರುವ ಸುದ್ದಿಯನ್ನು ಇಸ್ರೇಲಿ ಮಾಧ್ಯಮಗಳು ಪ್ರಕಟಿಸಿವೆ.

ಅವರು ಸಚಿವರಾಗುವುದರ ಬಗ್ಗೆ ಇಡೀ ಜಗತ್ತೇ ಭಯದಲ್ಲಿದೆ ಎಂದು ಅಧ್ಯಕ್ಷರು ಮೈಕ್ರೋ‌ಫೋನ್ ಆಫ್ ಮಾಡಲಾಗಿದೆ ಎಂದು ಭಾವಿಸಿ ಆತಂಕ ವ್ಯಕ್ತಪಡಿಸಿ  ಮಾತನಾಡಿರುವುದನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ. ಕಳೆದ ಹಲವು ತಿಂಗಳುಗಳಲ್ಲಿ ಅಲ್ ಅಕ್ಸಾ ಮಸೀದಿಯ ಕಾಂಪೌಂಡ್ ದಾಟುವ ವಿಷಯದಲ್ಲಿ ಯಹೂದಿ ಬಲ ಪಂತೀಯರು ತೀವ್ರ ವಿವಾದವನ್ನು ಹುಟ್ಟು ಹಾಕುತ್ತಲೇ ಇದ್ದಾರೆ.

ಈ ಕಾಂಪೌಂಡನ್ನು ಬಲಪಂಥೀಯ ಯಹೂದಿಯರು ದಾಟುವುದು ಮತ್ತು ಆ ಹಿನ್ನೆಲೆಯಲ್ಲಿ ಅಲ್ಲಿ ನಮಾಜ್ ನಿರತ ಫೆಲೇಸ್ತೀನಿಯರ ಜೊತೆ ಘರ್ಷಣೆ ನಡೆಯುತ್ತಲೇ ಇದೆ. 2007ರಲ್ಲಿ ಇವರು ದ್ವೇಷ ಪ್ರಚಾರಕ್ಕಾಗಿ ಶಿಕ್ಷೆಗೆ ಒಳಗಾಗಿದ್ದರು. ಇವರು ಅಲ್ಲಿಯ ಭಯೋತ್ಪಾದನಾ ಸಂಘಟನೆ ಕಚ್ ಗ್ರೂಪನ್ನು ತನ್ನ 16ನೇ ವಯಸ್ಸಿನಲ್ಲೇ ಸೇರಿಕೊಂಡಿದ್ದರು.

ಇದೇ ವೇಳೆ ಅಧ್ಯಕ್ಷರು ಸ್ವತಃ ಇತಮಾರ್ ಜೊತೆಗೆ ಮಾತಾಡಿದ್ದಾರೆ ಮತ್ತು ನಿಮ್ಮ ಬಗ್ಗೆ ಇಡೀ ಜಗತ್ತು ಭಯದಲ್ಲಿದೆ ಎಂದು ಹೇಳಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.