ಲೋಕಸಭಾ ಚುನಾವಣೆ: ಸಂದೇಹ ನಿವಾರಿಸಿದ ಚುನಾವಣಾ ಆಯೋಗ

0
672

ಹೊಸದಿಲ್ಲಿ: ನಿಗದಿತ ಸಮಯದಲ್ಲಿ ಲೋಕೊಸಭಾ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣಾ ಆಯೋಗದ ಹೇಳಿಕೆ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನ ಸ್ಥಿತಿಯ ವೇಳೆ ಬಂದಿದೆ. ಪಾಕಿಸ್ತಾನದ ಯಾವುದೇ ಕಿರುಕುಳವೂ ಭಾರತಕ್ಕೆ ದೊಡ್ಡ ವಿಷಯವಲ್ಲ ಎಂಬ ಸಂದೇಶವಿದು. ಬಹುತೇಕ ಮಾರ್ಚ್ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಭಾರತದ ವಾಯು ದಾಳಿಯ ಬಳಿಕ ಚುನಾವಣೆ ನಿಗದಿತ ಸಮಯಕ್ಕೆ ನಡೆಯುವ ಸಾಧ್ಯತೆ ಯ ಬಗ್ಗೆ ಕೆಲವೆಡೆ ಸಂದೇಹ ಸೃಷ್ಟಿಯಾಗಿತ್ತು. ಈಗ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ನಡೆಸುವ ಸ್ಪಷ್ಟ ಸೂಚನೆಯನ್ನು ನೀಡಿದೆ.

ಮಾತ್ರವಲ್ಲ ಚುನಾವಣಾ ಸಿದ್ಧತೆಯ ಕುರಿತು ಕೂಡ ವಿವರಿಸಿದ್ದು ಇಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್ ಕುರಿತು ಪ್ರಸ್ತಾಪಿಸಿದ ಆಯೋಗವು ಫಲಿತಾಂಶ ತಮ್ಮ ಪರ ಬಂದರೆ ಎಲ್ಲವೂ ಸರಿಯಿರುತ್ತದೆ. ವಿರುದ್ಧ ಬಂದರೆ ಇವಿಎಂ ವಿರುದ್ಧ ಆರೋಪ ಹೊರಿಸಲಾಗುತ್ತಿದೆ ಎಂದಿದೆ.

ಮುಖ್ಯ ಚುನಾವಣಾ ಆಯುಕ್ತರು ಇಂದು ಬೆಳಗ್ಗೆ ಎಲ್ಲ ಕೇಂದ್ರ ಏಜೆನ್ಸಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಎಲ್ಲ ಪಕ್ಷಗಳ ಪ್ರತಿನಿಧಿಗಳೊಂದಿಗೂ ಚರ್ಚಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ, ಚುನಾವಣಾ ಆಯುಕ್ತ ಅಶೋಕ್ ಲವಾಸಾ ಮತ್ತು ಸುಶೀಲ್ ಚಂದ್ರ ಕೂಡ ಉಪಸ್ಥಿತರಿದ್ದರು.