
ಪೂಂಚ್,ಮಾ.2: ವಾಯು ಸೇನೆ ವಿಂಗ್ ಕಮಾಂಡ್ ಅಭಿನಂದನ್ ವರ್ಧಮಾನ್ ಭಾರತಕ್ಕೆ ಹಸ್ತಾಂತರಿಸಿದ ಬೆನ್ನಿಗೆ ಗಡಿಯಲ್ಲಿ ಪಾಕಿಸ್ತಾನದ ತಂಟೆ ಮುಂದುವರಿದಿದ್ದು ಪೂಂಚ್, ರಜೌರಿಗಳಲ್ಲಿ ಪಾಕಿಸ್ತಾನದ ಸೈನ್ಯ ಶೆಲ್‍ದಾಳಿ ನಡೆಸಿದೆ.
ಪೂಂಚ್‍ನಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಶೆಲ್‍ದಾಳಿಯಲ್ಲಿ ಒಂದು ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಓರ್ವ ಮಹಿಳೆ ಇಬ್ಬರು ಮಕ್ಕಳು ಬಲಿಯಾಗಿದ್ದು ಓರ್ವ ಗಾಯಗೊಂಡಿದ್ದಾನೆ.
ಇದರ ಬೆನ್ನಿಗೆ ಗಡಿರಕ್ಷಣಾ ಪಡೆ ಬಲವಾದ ಪ್ರತಿದಾಳಿ ನಡೆಸಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಹಲವು ಸಲ ಭಾರತದ ಚೆಕ್‍ಪೋಸ್ಟಗಳಿಗೆ ಪಾಕಿಸ್ತಾನ ದಾಳಿ ನಡೆಸಿದೆ ಎಂದು ವರದಿ ತಿಳಿಸಿದೆ. ಮೆಂದರ್, ಬಾಲಕೋಟ್, ಕೃಷ್ಣಗಾಟ್ಟಿ ಕ್ಷೇತ್ರದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.
ಈ ನಡುವೆ, ಕುಪ್‍ವಾರದಲ್ಲಿ ಸುರಕ್ಷಾ ಸೇನೆ ಮತ್ತು ಭಯೋತ್ಪಾದನೆ ಪರಸ್ಪರ ಘರ್ಷಣೆ ನಡೆಸಿದೆ. ಇಬ್ಬರು ಪೊಲೀಸರ ಜೀವಹಾನಿಯಾಗಿದೆ. ಇಬ್ಬರು ಸಿಆರ್ ಪಿಎಫ್ ಯೋಧರು ಮತ್ತು ಇಬ್ಬರು ಪೊಲೀಸರು, ಒಬ್ಬ ನಾಗರಿಕ ಗಾಯಗೊಂಡಿದ್ದಾರೆ.











