ಕ್ರಿಮಿನಲ್ ಆಪಾದಿತರನ್ನು ಕಣಕ್ಕಿಳಿಸುತ್ತಿರುವ ಪಕ್ಷಗಳು

0
1563

@ ಸಲೀಮ್ ಬೋಳಂಗಡಿ
ಇಡೀ ದೇಶವೇ ಗುಜರಾತ್‍ನ ವಿಧಾನಸಭಾ ಚುನಾವಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದೆ. ಇಲ್ಲಿ ನಡೆಯುವ ಪ್ರಥಮ ಹಂತದ ಚುನಾವಣೆ ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಶೇಕಡಾ 15ರಷ್ಟು ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆಂಬ ಆತಂಕಕಾರಿ ವರದಿ ಬಹಿ ರಂಗವಾಗಿದೆ. ಕೊಲೆ, ಅತ್ಯಾಚಾರ ಮುಂತಾದ ಪ್ರಕರಣಗಳ ಆರೋಪಿಗಳಾಗಿರುವವರೇ ಹೆಚ್ಚಾಗಿ ಚುನಾವಣಾ ಕಣದಲ್ಲಿದ್ದಾರೆಂದು ಸಾಮಾಜಿಕ ಕಾರ್ಯಕರ್ತರ ಅಧ್ಯಯನದಿಂದ ತಿಳಿದುಬಂದಿದೆ. ಡಿ. 9ರಂದು ನಡೆಯುವ ಪ್ರಥಮ ಹಂತದ ಚುನಾವಣೆಯಲ್ಲಿ 977 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅದರಲ್ಲಿ 137 ಅಭ್ಯರ್ಥಿಗಳು ಕ್ರಿಮಿನಲ್ ಕೇಸುಗಳಲ್ಲಿ ಆಪಾದಿತರು ಎಂಬುದು ಅವರು ನಾಮಪತ್ರ ಸಲ್ಲಿಸುವಾಗ ಅವರೇ ಸ್ವತಃ ನೀಡಿದ ಮಾಹಿತಿಗಳಿಂದ ತಿಳಿದು ಬಂದಿದೆ. ಮಾತ್ರವಲ್ಲ, ಇವರಲ್ಲಿ 78 ಮಂದಿ ಕೊಲೆ, ಕೊಲೆ ಯತ್ನ ಅಪಹರಣ, ಅತ್ಯಾಚಾರ ಮುಂತಾದ ಗಂಭೀರ ಆಪಾದನೆಗಳನ್ನು ಎದುರಿಸು ವವರು. ಇವರಲ್ಲಿ 20 ಮಂದಿ ಕಾಂಗ್ರೆಸ್‍ನಲ್ಲಿ ಹತ್ತು ಮಂದಿ ಬಿಜೆಪಿ, ಎಂಟು ಮಂದಿ ಬಿ.ಎಸ್.ಪಿ. ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ
ದ್ದಾರೆ. ಜೆಡಿಯುವಿನ ಮಾಜಿ ಶಾಸಕ ಚೋಟು ವಾಸವ್‍ರ ಪುತ್ರ ಮಹೇಶ್ ವಾಸವ್ ವಿರುದ್ಧ ಎರಡು ಕೊಲೆ ಆರೋಪ, ಒಂದು ಕೊಲೆ ಯತ್ನ ಸಹಿತ 24 ಕ್ರಿಮಿನಲ್ ಮೊಕದ್ದಮೆಗಳಿವೆ. ಈತ ಭಾರತೀಯ ಟ್ರೈಬಲ್ ಪಕ್ಪದಲ್ಲಿ ಸ್ಪರ್ಧಿಸುತ್ತಿದ್ದಾನೆ. ಬಿಜೆಪಿಯ ಜಿತೇಂದ್ರ ಸೋಮ್ ವಿರುದ್ಧ 13 ಕೇಸುಗಳಿವೆ. ಇವರಲ್ಲಿ ಹೆಚ್ಚಿನವರು ಅತ್ಯಂತ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬುದು ಗಮನಾರ್ಹ.
ಈ ಎಲ್ಲ ವರದಿಗಳನ್ನು ಗಮನಿಸಿ ಭಾರತದಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಬಹುದಾಗಿದೆ. ಇಂತಹವರು ಚುನಾಯಿತ ರಾದರೆ ದೇಶದ ಪರಿಸ್ಥಿತಿ ಹೇಗಿರಬಹುದು ಎಂದು ಚಿಂತಿಸಿದಾಗ ಆತಂಕ ದಿಗಿಲು ಸಹಜ. ಗೂಂಡಾಗಳಿಗೆ ಇವರ ಗೆಲುವು ಹಬ್ಬದೂಟವಾಗ ಲಿದೆ. ಕ್ರಿಮಿನಲ್ ದಾವೆಯಿರುವವರನ್ನು ರಾಜ ಕೀಯದಿಂದ ದೂರವಿರಿಸಬೇಕೆಂಬ ಕೂಗು ಬಹಳ ಹಿಂದಿನಿಂದ ಕೇಳಿ ಬರುತ್ತಿದ್ದರೂ ನಮ್ಮ ರಾಜ ಕೀಯ ನಾಯಕರು ಅದನ್ನು ಕಿವಿಗೆ ಹಾಕಿಕೊಳ್ಳು ತ್ತಿಲ್ಲ. ಸುಪ್ರೀಮ್ ಕೋರ್ಟು ಕೂಡಾ ಹಲವು ಬಾರಿ ಕೆಲ ಮಾರ್ಗೋಪಾಯಗಳನ್ನು ಹೇಳಿದ್ದರೂ ಅದರಲ್ಲಿಯೂ ಪ್ರಗತಿ ಕಂಡುಬಂದಿಲ್ಲ. ಕಳಂಕಿತ ಶಾಸಕ ಮತ್ತು ಸಂಸದರ ವಿರುದ್ಧದ ಪ್ರಕರಣಗಳನ್ನು ಕೂಡಲೇ ಇತ್ಯರ್ಥಗೊಳಿಸಲು ತ್ವರಿತ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕೆಂದು ಇತ್ತೀಚೆಗೆ ಆದೇಶಿಸಿ ದ್ದನ್ನು ಇಲ್ಲಿ ಸ್ಮರಿಸಬಹುದು.
ಹೀಗೆಲ್ಲಾ ಇರುವಾಗಲೂ ರಾಜ ಕೀಯ ಪಕ್ಪಗಳು ಇವು ಯಾವು ದನ್ನೂ ಗಮನಿಸದೆ ಕಳಂಕಿತರನ್ನು ಮತ್ತೆ ಚುನಾವಣಾ ರಂಗಕ್ಕಿಳಿಸು ತ್ತಿರುವುದು ಆಶಾದಾಯಕ ಸೂಚನೆ ಯೇನಲ್ಲ. ಇಂತಹವರಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಯುಂಟಾಗುತ್ತದೆ ಎಂಬ ವಾಸ್ತವ ವನ್ನು ಆಯಾ ಪಕ್ಪದ ಪ್ರಭಾವೀ ನಾಯಕರು ಆಲೋಚಿಸಬೇಕು. ಪಕ್ಷಾಂತರ, ರೆಸಾರ್ಟ್ ರಾಜಕೀಯಗಳಿಗೆ ಇಂತಹ ರಾಜಕಾರಣಿಗಳೇ ಆಹಾರ ವಾಗುತ್ತಿದ್ದಾರೆ ಎಂಬುದೂ ಸ್ಪಷ್ಟ. ಸಮಾಜ ಘಾತುಕರೆನಿಸಿಕೊಂಡವರು ಸಮಾಜದ ಆಡಳಿತದ ಚುಕ್ಕಾಣಿ ಹಿಡಿದರೆ ಜನಸಾಮಾನ್ಯರ ನೋವು, ದುಗುಡ ದುಮ್ಮಾನಗಳು ಅವರಿಗೆ ಅರ್ಥವಾದೀತೇ? ಕೇವಲ ಸ್ವಾರ್ಥ ಕ್ಕಾಗಿ ಈ ರಾಜಕೀಯ ಪಕ್ಪಗಳು ಜನರ ಸ್ವಾಸ್ಥ್ಯವನ್ನು ಬಲಿ ಕೊಡು ತ್ತಿದೆಯೇ? ಈ ಕಳಂಕಿತರಿಗೆ ಅಂಕುಶ ಹಾಕಲು ರಾಜಕೀಯ ಪಕ್ಪಗಳೇಕೆ ಮುಂದಾಗುತ್ತಿಲ್ಲ? ಸಮಾಜ ಘಾತುಕರು ಚುನಾಯಿತರಾದರೆ ಅವರ ಬೆಂಬಲಿಗ ಮರಿ ರೌಡಿಗಳಿಗೆ ಹಸಿರು ನಿಶಾನೆ ತೋರಿಸಿದಂತೆ ಅಲ್ಲವೇ? ವಿಧಾನ ಸಭೆಯಲ್ಲಿ ನಡೆಯುವ ಚರ್ಚೆಯು ದಾಂಧಲೆ ಹಲ್ಲೆಯ ಹಂತಕ್ಕೆ ತಲು ಪಲು ಇಂತಹ ಚುನಾಯಿತರೇ ಕಾರಣ ಎಂಬುವುದನ್ನು ಬೇರೆ ಹೇಳಬೇಕಾ ಗಿಲ್ಲ ತಾನೇ? ಸರಕಾರದ ವಿರುದ್ಧ ದನಿಯೆತ್ತಿದವರನ್ನು ಅವರು ಮಟ್ಟ ಹಾಕಲು ಅಧಿಕಾರ ನೆರವಾಗು ತ್ತಿದೆಯಲ್ಲವೇ? ದೇಶದಲ್ಲಿ ನಡೆಯುವ ಎಲ್ಲ ಆವಾಂತರಗಳಿಗೂ ಇಂತಹವರ ಆಯ್ಕೆ ಕಾರಣವಾಗಿದೆ ಎಂಬುದು ಸ್ಪಷ್ಟ. ಹೀಗಿದ್ದರೆ ಸತ್ಯ, ನ್ಯಾಯವು ಮರೀಚಿಕೆಯಾಗಬಹುದು. ಯಾವುದೇ ರಾಜಕೀಯ ಪಕ್ಪದ ಅಭ್ಯರ್ಥಿಗಳಾಗಿ ದ್ದರೂ ಸರಿ ಕಳಂಕಿತರನ್ನು ಚುನಾಯಿಸಲೇಬಾರದು. ಈ ದೇಶದ ಪ್ರಜ್ಞವಂತ ನಾಗರಿಕರು ಈ ವಿಚಾರ ಗಳನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ದೇಶವು ಸ್ವಚ್ಛವಾಗ ಬೇಕಾದರೆ ಮೊದಲು ರಾಜಕೀಯ ರಂಗವು ಸ್ವಚ್ಛವಾಗಲೇಕು.