ಹಸಿವಿನಿಂದ ಬಳಲುತ್ತಿದ್ದ 34 ರೋಹಿಂಗ್ಯನ್ ಮಕ್ಕಳು, ಮಹಿಳೆಯರು ಮಲೇಶ್ಯ ಬೀಚ್‍ನಲ್ಲಿ ಪತ್ತೆ

0
784

ಕನಾರ್: ರೋಹಿಂಗ್ಯನ್ ಮಹಿಳೆಯರು ಮತ್ತು ಮಕ್ಕಳು ಮಲೇಶ್ಯದ ಉತ್ತರ ರಾಜ್ಯದ ಬೀಚ್‍ನಲ್ಲಿ ಕಂಡು ಬಂದಿದ್ದು ಬಹುತೇಕ ಇವರನ್ನು ಮಾನವ ಸಾಗಾಟದಾರರು ಕರೆತಂದು ಅಲ್ಲಿ ಬಿಟ್ಟಿರಬಹುದು ಎಂದು ಮಲೇಶ್ಯನ್ ಅಧಿಕಾರಿಗಳು ಶಂಕಿಸಿದ್ದಾರೆ.

ಶುಕ್ರವಾರ ನಸುಕಿನಲ್ಲಿ 34 ಮಂದಿ ಬೀಚ್‍ನಲ್ಲಿ ಕಂಡು ಬಂದರು ಎಂದು ಪೆರ್ಲಿಸ್ ರಾಜ್ಯದ ರಾಜಧಾನಿ ನಗರ ಕಂಗರ್‍ ನ ಪೊಲೀಸಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಒಂಬತ್ತು ಮಕ್ಕಳು ಕೂಡ ಸೇರಿದ್ದಾರೆ. ಒಂದು ವಾರದಿಂದ ಅವರು ಹಸಿವಿನಿಂದ ಬಳಲುತ್ತಿದ್ದರು. ಅವರ ಮೈಮೇಲೆ ಮಣ್ಣು ಮೆತ್ತಿಕೊಂಡಿದೆ. ಮ್ಯಾನ್ಮಾರ್ ವೆಲ್ಫೇರ್ ಗುಂಪು ಇವರೆಲ್ಲ ಥೈಲೆಂಡ್ ಅಥವಾ ಬಾಂಗ್ಲಾದೇಶದಿಂದ ಥೈಲೆಂಡ್‍ಗೆ ಸಾಗಿಸುವ ದಾರಿಯಲ್ಲಿ ಮಲೇಶ್ಯದಲ್ಲಿ ಮಾನವ ಸಾಗಾಟದಾರರು ತಂದು ಬಿಟ್ಟಿರಬಹುದು ಎಂದು ಹೇಳಿದೆ. ಮಲೇಶ್ಯದಲ್ಲಿ ಮುಸ್ಲಿಮರು ಹೆಚ್ಚಿರುವ ದೇಶವಾಗಿದ್ದು ಅವರಿಗೆ ಸಹಾನುಭೂತಿಯ ತಾಣವಾಗಿದೆ ಎಂದಿದೆ.

ಸುಮಾರು 700,000 ರೋಹಿಂಗ್ಯನ್ನರು 2017 ಆಗಸ್ಟ್ ನಿಂದ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿ ನಿರಾಶ್ರಿತ ಜೀವನ ನಡೆಸುತ್ತಿದ್ದಾರೆ.