ಬಿಜೆಪಿ ಎಡವಟ್ಟು: ಪ್ರಧಾನಿ ಮೋದಿ ಅಭಿವೃದ್ಧಿ ಯೋಜನೆಯ ಪೋಸ್ಟರ್ ನಲ್ಲಿ ಕೇರಳದ ಸಿಪಿಐಎಂ ಮೇಯರ್ ಚಿತ್ರ!?

0
665

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ತಿರುವನಂತಪುರಂ ಮೇಯರ್ ಆಗಿರುವ ಸಿಪಿಐಎಮ್‌ನ ಆರ್ಯಾ ರಾಜೇಂದ್ರನ್‌ರ ಚಿತ್ರವೊಂದು ಪ್ರಧಾನಿ ಮೋದಿಯ ಚಿತ್ರಗಳಿರುವ ಬೃಹತ್ ಪೋಸ್ಟರ್‌ಗಳಲ್ಲಿ ಸ್ಥಾನ ಪಡೆದಿದೆ. ಕೇರಳದ ರಾಜಧಾನಿ ತಿರುವನಂತಪುರಂ ಮೇಯರ್ ಆಗಿರುವ ಆರ್ಯಾ ರಾಜೇಂದ್ರನ್‌ರ ಚಿತ್ರವೊಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಚಿತ್ರಗಳಿರುವ ಬೃಹತ್ ಪೋಸ್ಟರ್‌ಗಳಲ್ಲಿ ಸ್ಥಾನ ಪಡೆದಿದೆ. ಸಾಮಾಜಿಕ ಜಾಲತಾಣಿಗರೊಬ್ಬರು ಇದರ ಬಗ್ಗೆ ಗಮನ ಸೆಳೆದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಈ ಪೋಸ್ಟರ್‌ನಲ್ಲಿ ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ್ ಬಗ್ಗೆ ವಿವರಿಸಲಾಗಿದೆಯಲ್ಲದೆ ಪಂಚಾಯತ್ ಸದಸ್ಯರಿಗೆ ತರಬೇತಿ ಮೂಲಕ ಅವರ ಸಬಲೀಕರಣಕ್ಕೆ ಸಹಾಯ ಮಾಡುವ ಕುರಿತು ವಿವರಿಸಲಾಗಿದೆ. ಆದರೆ ಬಿಜೆಪಿ ಸರಕಾರದ ಈ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವ ಆರ್ಯಾ ರಾಜೇಂದ್ರನ್ ಸಿಪಿಐಎಂ ಪಕ್ಷದಿಂದ ಆಯ್ಕೆಯಾದವರು ಎಂಬುದು ಇಲ್ಲಿ ಸ್ವಾರಸ್ಯಕರ ಅಂಶವಾಗಿದೆ. ಪೋಸ್ಟರ್‌ನಲ್ಲಿ ಆರ್ಯಾ ಮುಷ್ಠಿ ಹಿಡಿದ ಕೈಗಳನ್ನು ಮೇಲಕ್ಕೆತ್ತಿರುವುದು ಕಾಣಿಸುತ್ತದೆ. ಪೋಸ್ಟರ್‌ಗಳು ಗುಜರಾತಿ ಭಾಷೆಯಲ್ಲಿವೆ. ಈ ಪೋಸ್ಟರ್‌ಗಳ ಬಗ್ಗೆ ತಮಗೆ ತಿಳಿದಿಲ್ಲ ಎಂದು ಗುಜರಾತ್ ಬಿಜೆಪಿಯ ಮಾಧ್ಯಮ ಸಂಚಾಲಕ ಯಜ್ಞೇಶ್ ದವೆ ಹೇಳಿದ್ದಾರೆ.