ಮತ್ತೆ ಸಹಜ ಸ್ಥಿತಿಯತ್ತ ಹಜ್ ಯಾತ್ರೆ!

0
500

ಸನ್ಮಾರ್ಗ ವಾರ್ತೆ

ಜಿದ್ದಾ: ಸೌದಿಯ ಮಕ್ಕಾಕ್ಕೆ ತೆರಳಿ ಹಜ್ ನಿರ್ವಹಿಸುವುದು ಮುಸ್ಲಿಮರ ಬಹುದೊಡ್ಡ ಕನಸು ಮತ್ತು ಬಯಕೆ. ಈ ಬಾರಿ 20 ಲಕ್ಷ ಯಾತ್ರಿಕರು ಹಜ್ ನಿರ್ವಹಿಸಲಿದ್ದಾರೆ ಎಂದು ಸೌದಿ ಘೋಷಿಸಿದೆ. ಸೌದಿ ಅರೇಬಿಯಾದ ಮಕ್ಕಾಗೆ ತೆರಳಿ ಹಜ್ಜ್ ನಿರ್ವಹಿಸುವುದು ಮುಸ್ಲಿಮರ ಬಹು ದೊಡ್ಡ ಬಯಕೆ. ಕೊರೋನಾ ಕಾರಣಕ್ಕೆ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಕುಂಠಿತ ಗೊಂಡಿತ್ತು. ಕೊರೋನಾಕ್ಕಿಂತ ಮೊದಲಿನ ಅದೇ ಸ್ಥಿತಿಗೆ ಈ ಬಾರಿ ಹಜ್ ತನ್ನ ವೈಭವದೊಂದಿಗೆ ಮರಳಲಿದೆ.

ಒಟ್ಟು 18 ಲಕ್ಷ ಮಂದಿ ವಿದೇಶಿಯರಿಗೆ ಈ ಬಾರಿ ಹಜ್ ನಿರ್ವಹಿಸಲು ಅವಕಾಶ ಇದೆ. ಅದೇ ವೇಳೆ ಸೌದಿಯ ನಾಗರಿಕರು ಮತ್ತು ಸೌದಿಯಲ್ಲಿ ವಿದೇಶದಿಂದ ಬಂದು ದುಡಿಯುತ್ತಿರುವವರೂ ಸೇರಿ ಎರಡು ಲಕ್ಷ ಮಂದಿಗೆ ಅವಕಾಶ ಇದೆ. ಹೀಗೆ ಒಟ್ಟು 20 ಲಕ್ಷ ಮಂದಿ ಈ ಬಾರಿ ಹಜ್ ನಿರ್ವಹಿಸಲಿದ್ದಾರೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.