ಸನ್ಮಾರ್ಗ ವಾರ್ತೆ
ಮಂಗಳೂರು: ಇತ್ತೀಚೆಗೆ ಚಿಕ್ಕಮಗಳೂರಲ್ಲಿ ಕಾಲೇಜ್ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದು ತನ್ನ ಸಾವಿಗೆ ಸಂಘ ಪರಿವಾರದ ಓರ್ವ ಯುವ ನಾಯಕ ಹಿತೇಶ್ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾಳೆ. ದುಷ್ಕರ್ಮಿ ವಿರುದ್ಧ ಪ್ರಕರಣ ದಾಖಲಿಸಲು ಕೂಡಾ ಪೊಲೀಸರು ತಡ ಮಾಡಿದ್ದಾರೆ.ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ರವರು ಇತ್ತೀಚೆಗೆ ಬಹಿರಂಗವಾಗಿ ಮೂಲಭೂತ ಸೌಕರ್ಯದ ಪ್ರಶ್ನೆ ಕೇಳಬೇಡಿ. ರಸ್ತೆ ಗುಂಡಿ, ಚರಂಡಿ ಬಗ್ಗೆ ಮಾತನಾಡಬೇಡಿ. ಲವ್ ಜಿಹಾದ್ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿಕೆ ನೀಡಿದ್ದರು.ರಾಜ್ಯದಲ್ಲಿ ಇಂದು ನಳಿನ್ ಕುಮಾರ್ ರವರು ಬಿತ್ತಿದ ಭೀಜದ ಫಸಲು ಬರುತ್ತಾ ಇದೆ. ಸಂಘ ಪರಿವಾರದ ಪುಂಡರು ಸ್ವಚ್ಚಂದವಾಗಿ ಕಾನೂನಿನ ಭಯವಿಲ್ಲದೆ, ಎಗ್ಗಿಲ್ಲದೇ ಯುವತಿಯರ ವಿಷಯದಲ್ಲಿ ಮದ್ಯ ಪ್ರವೇಶಿಸಿ ಅವರ ಖಾಸಗಿತನವನ್ನು ಭಂಗ ಗೊಳಿಸುವುದಲ್ಲದೇ ಜೀವ ಹಾನಿಯವರೆಗೆ ರಾದ್ದಾಂತವನ್ನು ಮುಂದುವರಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಕಿಡಿಕಾರಿದ್ದಾರೆ.
ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಅವರು, ನಳಿನ್ ಕುಮಾರ್ ಕಟೀಲ್ ಅವರು ಉಪದೇಶಿಸಿದ ಪಾಠ ಲವ್ ಜಿಹಾದ್ ನಿಂದ ಮೊದಲ್ಗೊಂಡು ನಾರಿ ರಕ್ಷಕರು ಸೃಷ್ಟಿಯಾಗುವ ವರೆಗೆ ಫಸಲು ತೆಗೆಯುತ್ತಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.ದುಷ್ಕರ್ಮಿ ಹಿತೇಶ್ ನಿಗೆ ಶಿಕ್ಷೆ ಆಗಬೇಕಿದೆ. ನಳಿನ್ ನೈತಿಕ ಹೊಣೆ ಹೊತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅಂಗಡಿ ಮಳಿಗೆಯಲ್ಲಿ ಮುಸ್ಲಿಮ್ ಯುವಕ ಯುವತಿ ಪರಸ್ಪರ ಮಾತನಾಡಿ ಕೊಂಡರು ಎಂದು ತಗಾದೆ ಎಬ್ಬಿಸಿ, ಹಲ್ಲೆ ನಡೆಸಿ ರಾದ್ದಾಂತಗೈದ ಪ್ರಕರಣದಲ್ಲಿ ಹೇಳಿಕೆ ನೀಡಿದ ಶೋಭಕ್ಕ, ಭರತ್, ಪೂಂಜಾಗಳು ಈಗೆಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.












