ಡಾ.ಕಫಿಲ್ ಖಾನ್ ರ ಹತ್ತು ತಿಂಗಳ ಹಿಂದಿನ ಕಾರ್ಯಕ್ರಮಕ್ಕೆ ತಿರುವು: ತನಿಖೆಗೆ ಕೋಝಿಕ್ಕೋಡ್ ವಿಶ್ವವಿದ್ಯಾನಿಲಯ ಆಗ್ರಹ, ಬಿಜೆಪಿ ಕೈವಾಡ ಶಂಕೆ – ಮೀಡಿಯ ವನ್ ವರದಿ

0
832

;ಕೋಝಿಕ್ಕೋಡ್,ಮಾ.6: ಡಾ.ಕಫಿಲ್ ಖಾನ್ ಕೇರಳದ ಕ್ಯಾಲಿಕಟ್ ಮೆಡಿಕಲ್ ಕಾಲೇಜಿನಲ್ಲಿ ಭಾಗವಹಿಸಿದ ಕಾರ್ಯಕ್ರಮವನ್ನು ತನಿಖಿಸಬೇಕೆಂದು ಕೋಝಿಕ್ಕೋಡ್ ವಿಶ್ವವಿದ್ಯಾನಿಲಯವು ಪೊಲೀಸರಿಗೆ ದೂರು ನೀಡಿರುವುದರ ಕುರಿತು ವಿವಾದ ಸೃಷ್ಟಿಯಾಗಿದೆ.

ಕಫಿಲ್ ಖಾನ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ಕುರಿತು ತನಿಖೆ ನಡೆಸುವಂತೆ ಆಸ್ಪತ್ರೆಯ ಆಡಳಿತಾಭಿವೃದ್ಧಿ ಸಮಿತಿಯು ಪೊಲೀಸ್‍ರನ್ನು ಆಗ್ರಹಿಸಿದೆ. ಬಿಜೆಪಿಯ ಬೇಡಿಕೆಯನ್ನು ಪರಿಗಣಿಸಿ ಸಮಿತಿಯು ಪೊಲೀಸ್ ತನಿಖೆಗೆ ಮನವಿ ಮಾಡಿದೆ ಎನ್ನಲಾಗಿದೆ. ಡಾ.ಕಫಿಲ್ ಖಾನ್ ಹತ್ತು ತಿಂಗಳು ಹಿಂದೆ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ತನಿಖೆ ನಡೆಸಲು ಇದೀಗ ಪೊಲೀಸರನ್ನು ಕೇಳಿಕೊಳ್ಳಲಾಗಿದೆ ಅನ್ನುವುದೇ ಸೋಜಿಗ.