ಎಂಟಿಬಿ ನಾಗರಾಜ ಹೇಳಿಕೆ: ವೆಲ್ಫೇರ್ ಪಾರ್ಟಿ ರಾಜ್ಯಾದ್ಯಕ್ಷ ತಾಹೀರ್ ಹುಸೈನ್ ಆಕ್ರೋಶ

0
441

ಸನ್ಮಾರ್ಗ ವಾರ್ತೆ

ತನ್ನ ಸೋಲಿಗೆ ಮುಸ್ಲಿಂ ಸಮುದಾಯ ಕಾರಣ ಎಂದು ಚುನಾವಣಾ ಅವಲೋಕನ ಸಭೆಯಲ್ಲಿ ಹೇಳಿ ಸಮುದಾಯವನ್ನು ನಿಂದನೆ ಮಾಡಿರುವ ಬಿಜೆಪಿ ನಾಯಕ ಎಂಟಿಬಿ ನಾಗರಾಜ ವರ್ತನೆ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಟಿಬಿ ನಾಗರಾಜ್ ಸೋಲಿಗೆ ಬಿಜೆಪಿಯ ದುರಾಡಳಿತವೇ ಕಾರಣ. ಅದನ್ನು ಒಪ್ಪಿಕೊಂಡು ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುವ ಬದಲು ನೇರವಾಗಿ ಒಂದು ಸಮುದಾಯವನ್ನು ಹೊಣೆ ಮಾಡುತ್ತಿರುವುದು ಹತಾಶೆಯ ಪರಮಾವಧಿಯಾಗಿದೆ.

ಮುಸ್ಲಿಮ್ ಸಮುದಾಯ, ಅಲ್ಲಾಹ್, ಕುರಾನ್ ಮೇಲೆ ಪ್ರಮಾಣ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆಂದು ಸುಳ್ಳು ಆರೋಪ ಮಾಡುತ್ತಾ, ಚುನಾವಣೆಯಲ್ಲಿ ಹಣ ಹಂಚಿರುವ ಬಗ್ಗೆ ಬಹಿರಂಗವಾಗಿ ಒಪ್ಪಿಕೊಡಿದ್ದಾರೆ” ಎಂದು ತಾಹಿರ್ ಹುಸೈನ್ ಹೇಳಿದರು.