‘ಶಾಂತಿ ಪ್ರಕಾಶನ’ ವತಿಯಿಂದ ರಾಜ್ಯ ಮಟ್ಟದ ಮಕ್ಕಳ ಕಥಾ ಸ್ಪರ್ಧೆ

0
560

ಸನ್ಮಾರ್ಗ ವಾರ್ತೆ

ಕಥೆಗಾರರಿಗೊಂದು ಸುವರ್ಣಾವಕಾಶ!!!

ಬರವಣಿಗೆ ನಿಮ್ಮದು… ಪ್ರೋತ್ಸಾಹ ನಮ್ಮದು…

ಬಹುಮಾನಗಳು:
▪️ಪ್ರಥಮ – 5000 ನಗದು ಮತ್ತು ಪ್ರಮಾಣ ಪತ್ರ
▪️ದ್ವಿತೀಯ – 3000 ನಗದು ಮತ್ತು ಪ್ರಮಾಣ ಪತ್ರ
▪️ತೃತೀಯ – 2000 ನಗದು ಮತ್ತು ಪ್ರಮಾಣ ಪತ್ರ
▪️ಆಯ್ದ ಹತ್ತು ಕಥೆಗಳಿಗೆ ಪ್ರೋತ್ಸಾಹವಾಗಿ 1000 ನಗದು ಮತ್ತು ಪ್ರಮಾಣ ಪತ್ರ ನೀಡಲಾಗುವುದು.

ನಿಯಮಗಳು:

  1. ಕಥೆಯು ಸ್ವಂತ ರಚನೆಯಾಗಿರಬೇಕು. ಕೃತಿಚೌರ್ಯ ಮತ್ತು ಅನುವಾದಿತ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ.
  2. ಕಥೆಯು ಕನ್ನಡದಲ್ಲೇ ಬರೆಯಬೇಕು.
  3. ಒಬ್ಬರಿಗೆ ಒಂದೇ ಕಥೆ ಕಳುಹಿಸಲು ಅವಕಾಶ ಹಾಗೂ ಯಾವುದೇ ಕಾವ್ಯನಾಮದಿಂದ (Pen Name) ಕಥೆಯನ್ನು ಬರೆದಿರಬಾರದು.
  4. ಕಥೆಯು 600-800 ಪದಗಳ ಮಿತಿಯಲ್ಲಿರಬೇಕು.
  5. ಕಥೆಯಲ್ಲಿ ಮಕ್ಕಳಿಗೆ ಅನುಕೂಲವಾಗುವ ಭಾಷೆ, ಶೈಲಿ ಮತ್ತು ಮೌಲ್ಯಗಳಿಗೆ ಆದ್ಯತೆ ಪ್ರಾಶಸ್ತ್ಯ ನೀಡಬೇಕು.
  6. ಕಥೆಗಾರರಿಗೆ ಯಾವುದೇ ವಯೋಮಿತಿಯ ನಿರ್ಬಂಧ ಇರುವುದಿಲ್ಲ.
  7. ಕಥೆಯು ಹೊಸದಾಗಿರಬೇಕು. ಮಕ್ಕಳ ಕಥೆಯಾಗಿರಬೇಕು. ಯಾವುದೇ ಪತ್ರಿಕೆ, ಪುಸ್ತಕ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರಬಾರದು.
  8. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುವುದು.
  9. ಕಳುಹಿಸಿಕೊಟ್ಟಿರುವ ಕಥೆಗಳ ಪೂರ್ತಿ ಹಕ್ಕುಸ್ವಾಮ್ಯ ಆಯೋಜಕರಿಗೆ ಇರುವುದು.
  10. ಕಥೆ ಕಳುಹಿಸಲು ಕೊನೆಯ ದಿನಾಂಕ 2023 ಜುಲೈ 15 ನಂತರ ಬಂದ ಕಥೆಯನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.
  11. ಕಥೆಗಳನ್ನು [email protected] ಗೆ ಮೈಲ್ ಮಾಡಬಹುದು (ಈಮೈಲ್ ನ subject ನಲ್ಲಿ ‘ಮಕ್ಕಳ ಕಥಾ ಸ್ಪರ್ಧೆ’ ಎಂದು ನಮೂದಿಸಿ) ಅಥವಾ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿ ಕೊಡಬಹುದು.
  12. ಕಥೆಗಳನ್ನು ಕಳಿಸಲು ಯಾವುದೇ ಶುಲ್ಕವಿಲ್ಲ.ಕಥೆಯ ಜೊತೆಗೆ ನಿಮ್ಮ ಹೆಸರು, ಊರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

ಶಾಂತಿ ಪ್ರಕಾಶನ
ಬಾಲ ಸಾಹಿತ್ಯ ವಿಭಾಗ
ಸಹಕಾರಿ ಸದನ , ಮಿಷನ್ ಸ್ಟ್ರೀಟ್,
ಮಂಗಳೂರು -575001

Mob :
8867468444 |9449333496