ಕರ್ತಾರ್‍ಪುರ ಕಾರಿಡಾರ್: ಎರಡೂ ಕಡೆಯಿಂದ ಧನಾತ್ಮಕ ಸಂದೇಶ

0
417

ಇಸ್ಲಾಮಾಬಾದ್, ಮಾ. 19: ಪಾಕಿಸ್ತಾನ ಮತ್ತು ಭಾರತದ ಅಧಿಕಾರಿಗಳ ಮಟ್ಟದಲ್ಲಿ ಕರ್ತಾರ್ ಪುರ ಕಾರಿಡಾರ್ ನ ಕುರಿತು ಚರ್ಚೆ ನಡೆಯುತ್ತಿದ್ದು, ಅಲ್ಲಿನ ಕಟ್ಟಡ ನಿರ್ಮಾಣ ತಂತ್ರಜ್ಞಾನ ಮತ್ತು ಸಿಖ್ ಯಾತ್ರಿಕರಿಗೆ ಅಲ್ಲಿ ಒದಗಿಸಬೇಕಾದ ಸೌಲಭ್ಯಗಳ ಕುರಿತು ಚರ್ಚೆ ನಡೆಯುತ್ತದೆ.

ಎರಡನೆ ಹಂತದ ಚರ್ಚೆ ಕರ್ತಾರಪುರದ ಶೂನ್ಯ ಬಿಂದುವಿನಲ್ಲಿ ಮಂಗಳವಾರ ನಡೆಯಲಿದ್ದು ಭಾರತ ಝಿರೊ ಬಿಂದುವಿನ ನಿರ್ದೇಶಾಂಕಗಳನ್ನು ಕೂಡ ನೀಡಿದೆ.

ಪಾಕಿಸ್ತಾನದಿಂದ ಹದಿನೆಂಟು ಮಂದಿ ವಿದೇಶ ಸಚಿವಾಲಯದ ಅಧಿಕಾರಿಗಳ ತಂಡವು ಅಲ್ಲಿನ ವಿದೇಶ ಕಚೇರಿ ವಕ್ತಾರ ಡಾ. ಮುಹಮ್ಮದ್ ಫೈಝಲ್ ನೇತೃತ್ವದಲ್ಲಿ ಮಾರ್ಚ್ ಹದಿನಾಲ್ಕರಂದು ಭಾರತಕ್ಕೆ ಭೇಟಿಯಾಗಿ ಚರ್ಚೆ ನಡೆಸಿದ್ದರು. ಎರಡು ಕಡೆಯ ತಜ್ಞರ ಮಟ್ಟದಲ್ಲಿ ವಿವರವಾಗಿ ಚರ್ಚೆ ನಡೆಯುತ್ತಿದ್ದು ಭಾರತ ಮತ್ತು ಪಾಕಿಸ್ತಾನ ಕರ್ತಾರ್‍ಪುರ್ ಕಾರಿಡಾರನ್ನು ತೆರೆಯುವ ಕುರಿತು ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ವರದಿಯಾಗಿದೆ. ಎರಡು ದೇಶಗಳ ಸಹಭಾಗಿತ್ವದಲ್ಲಿ ಕಾರಿಡಾರ್ ನಿರ್ಮಾಣವಾಗಲಿದೆ ಎಂದು ಈಗಾಗಲೇ ಪಾಕಿಸ್ತಾನದ ವಿದೇಶ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಭಾರತದ ಗುರುದ್ವಾರಗಳಿಗೆ ವೀಸಾ ಪ್ರೀ ಕೊಡುಗೆ ನೀಡುವ ಕುರಿತು ಸಮಾಲೋಚನೆ ನಡೆದಿದೆ. ಗುರುನಾನಕ್‍ರ 550ನೆ ಜನ್ಮದಿನಾಚರಣೆ ನಡೆಯುತ್ತಿದ್ದು ಕಾರಿಡಾರ್ ಈ ವರ್ಷವೇ ಶುಭಾರಂಗೊಳ್ಳುವ ನೀರಿಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.