ಮುಂಬೈ ಭಯೋತ್ಪಾದನಾ ದಾಳಿಯ ಕುರಿತ ಆಸ್ಟ್ರೇಲಿಯಾ ನಿರ್ದೇಶಕನ ಹಾಲಿವುಡ್ ಸಿನೆಮಾಕ್ಕೆ ನ್ಯೂಝಿಲೆಂಡ್‍ನಲ್ಲಿ ನಿಷೇಧ

0
651

ವೆಲ್ಲಿಂಗ್ಟನ್, ಮಾ. 19: ದೇವ್ ಪಟೇಲ್ ನಾಯಕನಾಗಿರುವ ಹೋಟೆಲ್ ಮುಂಬೈ ಎಂಬ ಹಾಲಿವುಡ್ ಸಿನೆಮಾವನ್ನು ನ್ಯೂಝಿಲೆಂಡಿನ ಎಲ್ಲ ಸಿನೆಮಾ ಗೃಹಗಳಿಂದ ತೆರವುಗೊಳಿಸಲಾಗಿದೆ. ಕ್ರೈಸ್ಟ್ ಚರ್ಚ್, ಲಿನ್‍ವುಡ್ ಮಸೀದಿಯಲ್ಲಿ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈ ತೀರ್ಮಾನ ತಳೆದಿದೆ. 2008ರ ನವೆಂಬರ್ ಎಂಟಕ್ಕೆ ಮುಂಬೈ ತಾಜ್ ಹೊಟೇಲಿನಲ್ಲಿ ನಡೆದ ಭಯೋತ್ಪಾದನೆಯ ಕುರಿತ ಸಿನೆಮಾದಲ್ಲಿ ಅನುಪಮ್ ಖೇರ್ ಸಹಿತ ಹಲವು ಬಾಲಿವುಡ್, ಹಾಲಿವುಡ್ ತಾರೆಯರು ಅಭಿನಯಿಸಿದ್ದರು.

ತಾಜ್ ಹೊಟೇಲ್ ಸಿಬ್ಬಂದಿ, ಮತ್ತು ಅಲ್ಲಿ ಉಳಿದಿದ್ದ ಗ್ರಾಹಕರನ್ನು ರಕ್ಷಿಸುವ ವೇಳೆ ಜೀವ ಕಳಕೊಂಡ ಹೊಟೇಲ್ ನೌಕರನಾಗಿ ದೇವ್ ಪಟೇಲ್ ಚಿತ್ರದಲ್ಲಿ ನಟಿಸಿದ್ದಾರೆ. ಹೊಟೆಲ್ ಮುಂಬೈ ನ್ಯೂಝಿಲೆಂಡಿನ ಯಾವ ಥಿಯೆಟರಿನಲ್ಲಿ ಪ್ರದರ್ಶನ ನಿಷೇಧಿಸಲಾಗಿದೆ ಎಂದು ಎನ್‍ಝೆಡ್ ಹೆರಾಲ್ಡ್ ವರದಿ ಮಾಡಿದೆ. ನಂತರ ಅನುಪಮ್ ಖೇರ್ ನೇತೃತ್ವದ ಚಿತ್ರದ ಪ್ರಮೋಶನ್ ಕಾರ್ಯಕ್ರಮಗಳು ರದ್ದಾಗಿವೆ.

ಕಳೆದ ಗುರುವಾರ ಚಿತ್ರ ನ್ಯೂಝಿಲೆಂಡಿನಲ್ಲಿ ತೆರೆಕಂಡಿತ್ತು. ಭಯೋತ್ಪಾದನಾ ದಾಳಿ ನಡೆದ ಬಳಿಕ ಮಾರ್ಚ್ 28ರವರೆಗೆ ಸಿನೆಮಾ ಪ್ರದರ್ಶನವನ್ನು ನಿಲ್ಲಿಸಲಾಗಿದೆ ಎಂದು ನ್ಯೂಝಿಲೆಂಡಿನ್ ಐಕೆನ್ ಫಿಲಂ ಡಿಸ್ಟ್ರಿಬ್ಯೂಟರ್ಸ್ ತಿಳಿಸಿತ್ತು. ನ್ಯೂಝಿಲೆಂಡಿನಲ್ಲಿ ಈ ಸಿನೆಮಾ ಬೃಹತ್ ಕಲೆಕ್ಷನ್ ದಾಖಲಿಸಿದೆ. ಹಣ ಸಂಗ್ರಹದಲ್ಲಿ ಕ್ಯಾಪ್ಟನ್ ಮರ್ವೆಲ್ ಸಿನೆಮಾಕ್ಕೆ ಹತ್ತಿರದಲ್ಲಿದೆ.

ಆಸ್ಟ್ರೇಲಿಯದ ನಿರ್ದೇಶಕ ಎ. ಮಾರಿಸನ್ ಸಿನೆಮಾ ನಿರ್ದೇಶಿಸಿದ್ದರು. ದೇವ್‍ಪಟೇಲ್ ಅಲ್ಲದೆ ಆರ್ಮಿ ಹಾಮರ್, ನಾಸ್ನಿನ್ ಬೊನೈದಿ, ಟಿಲ್ಡ ಕೊಬಂ, ಹಾರ್ವಿ, ಅನುಪಮ್ ಖೇರ್, ಜೇಸನ್ ಐಸಾಕ್ ಸಿನೆಮಾದಲ್ಲಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.