ಊರಿಗೆ ಹೋದರೂ ತಂದೆಯನ್ನು ನೋಡಲಾಗದೆ ಮರಳಿದ ಮಅದನಿ

0
495

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜು.10: ತಂದೆಯನ್ನು ಭೇಟಿಯಾಗಲು ಸಾಧ್ಯವಾಗದೆ ಪಿಡಿಪಿ ಅಧ್ಯಕ್ಷ ನಾಸರ್ ಮಅದನಿ ಬೆಂಗಳೂರಿಗೆ ಮರಳಿದ್ದಾರೆ. ಮಅದನಿ  ಜೂನ್ 26ಕ್ಕೆ ಕೊಚ್ಚಿಗೆ ತಲುಪಿದ್ದರು. ಆದರೆ  ಅವರ ಆರೋಗ್ಯ ಕೆಟ್ಟಿತು. ತದ ನಂತರ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಆದ ಕಾರಣ ತನ್ನ ಊರು ಆನ್‍ವರ್ ಶೇರಿಗೆ ಹೋಗಲಾಗಿಲ್ಲ.

ಮಅದನಿಯವರ ತಂದೆಯ ಆರೋಗ್ಯ ಚಿಂತಾಜನಕವಾಗಿರುವುದರಿಂದ ಅವರನ್ನು ಮಅದನಿಯವರನ್ನು ದಾಖಲಿಸಿದ್ದ ಕೊಚ್ಚಿಯ ಆಸ್ಪತ್ರೆಗೆ ಕರೆತರಲು ಸಾಧ್ಯವಾಗಿಲ್ಲ. ತದನಂತರ ಅವರು ತನ್ನ ತಂದೆಯನ್ನು ನೋಡದೆಯೇ ಬೆಂಗಳೂರಿಗೆ ಮರಳಬೇಕಾಯಿತು.

ಇದೇ ವೇಳೆ ಕೇರಳಕ್ಕೆ ಹೋಗಲು ತನಗೆ ಅನುಮತಿ ನೀಡುವಂತೆ  ಸಲ್ಲಿಸಿದ ಅರ್ಜಿಯಲ್ಲಿ ವಿಚಾರಣೆಯನ್ನು ಸುಪ್ರೀಂಕೋರ್ಟು ಸೋಮವಾರಕ್ಕೆ ಮುಂದೂಡಿದೆ. ಕರ್ನಾಟಕದಲ್ಲಿ ಆಡಳಿತ ಬದಲಾವಣೆಯಾಗಿದ್ದರಿಂದ ಸರಕಾರ ಪರ ಹೊಸ ವಕೀಲರು ಇಂದು ಕೋರ್ಟಿನಲ್ಲಿ ಹಾಜರಾಗಿದ್ದರು. ಸರಕಾರದ ನಿಲುವು ತಿಳಿಸಲು ಸಮಯ ಕೇಳಿದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟು ಮುಂದೂಡಿತು.

ಮಅದನಿಗೆ ಊರಿಗೆ ಮರಳಲು ಕೋರ್ಟು ನೀಡಿದ ಅನುಮತಿಯನ್ನು ಜಾರಿಗೊಳಿಸದಿರಲಿಕ್ಕಾಗಿ ಕರ್ನಾಟಕ ಸರಕಾರ ವಿಚಿತ್ರವಾದ ಕ್ರಮವನ್ನು  ಕೈಗೊಂಡಿತು ಎಂದು ಕಪಿಲ್ ಸಿಬಲ್ ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಿಕೊಟ್ಟರು. ಮೂರು ತಿಂಗಳು ಕೇರಳದಲ್ಲಿ ಉಳಿಯಲು ಸುಪ್ರೀಂಕೋರ್ಟು ವಿನಾಯತಿ ಕಲ್ಪಿಸಿದ್ದರೂ ಅವರಿಗೆ ಕೇರಳಕ್ಕೆ ಹೋದಾಗ  ತಂದೆಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ . ಮೂರು ತಿಂಗಳಿಗೆ ಕರ್ನಾಟಕ  ಸುರಕ್ಷೆಯ ವೆಚ್ಚ ಒಂದು ಕೋಟಿ ರೂಪಾಯಿ ಕೇಳಿದೆ. ಇಷ್ಟು ಹಣದ ಹೊರೆಯನ್ನು ಸಹಿಸಲು ಸಾಧ್ಯವಾಗದ್ದರಿಂದ ಕಳೆದ ತಿಂಗಳು ಕೇರಳಕ್ಕೆ ಹೋಗಿ ಆ ದಿನ ಆಸ್ಪತ್ರೆಯಲ್ಲಿ ಇರಬೇಕಾಯಿತು. ಜಾಮೀನು ನಿಬಂಧನೆ ಪಾಲಿಸುವ ಸಲುವಾಗಿ ಒತ್ತಾಯದಿಂದ ಡಿಸ್‍ಚಾರ್ಜ್ ಮಾಡಬೇಕಾಗಿ ಬಂತು ಎಂದು ಸಿಬಲ್ ಹೇಳಿದರು.  ವಕೀಲ ಹಾರಿಸ್ ಬೀರಾನ್ ಕೂಡ ಮಅದನಿ ಪರ ಹಾಜರಾಗಿದ್ದಾರೆ.

ಈಗಿನ ಜಾಮೀನು ವ್ಯವಸ್ಥೆಯಲ್ಲಿ ಮಅದನಿಗೆ ಬೆಂಗಳೂರಲ್ಲಿ ವಾಸಿಸುವ ಅನುಮತಿ ಇದೆ. ಇದನ್ನು ಬದಲಿಸಲು ಮತ್ತು  ತನಗೆ ಊರಿಗೆ ಹೋಗಲು ಅನುಮತಿಸಬೇಕೆಂದು ಸುಪ್ರೀಂಕೋರ್ಟಿನಲ್ಲಿ ಮಅದನಿ ಅರ್ಜಿ ಸಲ್ಲಿಸಿದ್ದಾರೆ. ತಂದೆಯನ್ನು ನೋಡಲು ವಿಶೇಷ ಅನುಮತಿ ಪಡೆದು ಕೇರಳಕ್ಕೆ ಹೋದರೂ ತಂದೆಯನ್ನು ಭೇಟಿ ಮಾಡಲು ಸಾಧ್ಯವಾಗದೆ ಮರಳಿದ್ದಾರೆ.