ಬುರ್ಜ್ ಖಲೀಫದಲ್ಲಿ ಜಸಿಂತಾ ಆರ್ಡನ್‍ರ ಚಿತ್ರ ಪ್ರದರ್ಶಿಸಿ ನ್ಯೂಝಿಲೆಂಡ್ ಪ್ರಧಾನಿಗೆ ಗೌರವ ಸಲ್ಲಿಸಿದ ಯುಎಇ

0
1021

ಯುಎಇ,ಮಾ. 23: ನ್ಯೂಝಿಲೆಂಡಿನ ಕ್ರೈಸ್ಟ್‌ಚರ್ಚ್‍ನಲ್ಲಿ ಮಸೀದಿಯ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಬಲಿಪಶುಗಳ ಕುರಿತು ನ್ಯೂಝಿಲೆಂಡ್ ಸರಕಾರ ತೋರಿಸಿದ ಗೌರವಕ್ಕೆ ಯುಎಇ ಕೃತಜ್ಞತೆ ಸಲ್ಲಿಸಿದೆ. ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫದಲ್ಲಿ ನ್ಯೂಝಿಲೆಂಡಿನ ಪ್ರಧಾನಿಯ ಚಿತ್ರವನ್ನು ಯುಎಇ ಪ್ರದರ್ಶಿಸಿ ಅವರಿಗೆ ಗೌರವ ಸಲ್ಲಿಸಿತು.

ಮಸೀದಿ ದಾಳಿಗೆ ತುತ್ತಾದವರಲ್ಲಿ ಓರ್ವ ಮಹಿಳೆಯನ್ನು ಅಪ್ಪಿ ಹಿಡಿದ ನ್ಯೂಝಿಲೆಂಡ್ ಪ್ರಧಾನಿ ಜೆಸಿಂತಾ ಅರ್ಡನ್ ಅಪ್ಪಿಹಿಡಿದ ಚಿತ್ರವನ್ನು ನಿನ್ನೆ ರಾತ್ರೆ ಬುರ್ಜ್ ಖಲೀಫದಲ್ಲಿ ಕೃತಜ್ಞತಾ ಸೂಚಕವಾಗಿ ಪ್ರದರ್ಶಿಸಲಾಯಿತು. ಈ ಚಿತ್ರವನ್ನು ಯುಎಇ ಪ್ರಧಾನಿ ಮತ್ತು ದುಬೈ ಆಡಳಿತಾಧಿಕಾರಿ ಶೇಖ್ ಮುಹಮ್ಮದ್ ಬಿನ್ ರಾಶೀದ್ ಅಲ್‍ ಮಕ್ತೂಂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಗಾಢ ಮೌನಕ್ಕೆ ತುತ್ತಾದ ನ್ಯೂಝಿಲೆಂಡ್ ಮಸೀದಿಯಲ್ಲಾದ ಭಯೋತ್ಪಾದಾಳಿಯಲ್ಲಿ ಮೃತರಾದವರನ್ನು ಗೌರವಿಸಿದೆ. ಪ್ರಧಾನಿ ಜೆಸಿಂತಾ ಆರ್ಡನ್ ಮತ್ತು ನ್ಯೂಝಿಲೆಂಡಿಗೆ ಕೃತಜ್ಞತೆಗಳು, ನಿಮ್ಮ ಪ್ರಾಮಾಣಿಕ ಅನುಕಂಪ, ಬೆಂಬಲ ಭಯೋತ್ಪಾದನೆಯಲ್ಲಿ ತತ್ತರಿಸಿದ ಜಗತ್ತಿನ 105 ಕೋಟಿ ಮುಸ್ಲಿಮರಿಗೆ ಸಲ್ಲಿಸಿದ ಗೌರವವಾಗಿದೆ ಎಂದು ಅಲ್‍ಮಕ್ತೂಮ್‍ರು ಹೇಳಿದ್ದಾರೆ.