Received msg from PM Modi: "I extend my greetings & best wishes to the people of Pakistan on the National Day of Pakistan. It is time that ppl of Sub-continent work together for a democratic, peaceful, progressive & prosperous region, in an atmosphere free of terror and violence"
— Imran Khan (@ImranKhanPTI) March 22, 2019
ಹೊಸದಿಲ್ಲಿ,ಮಾ. 23: ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ರಾಷ್ಟೀಯ ದಿವಸ ಸಂದರ್ಭದಲ್ಲಿ ಸಂದೇಶ ಕಳುಹಿಸಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನೀಯರಿಗೆ ಶುಭಾಶಯ ಕೋರಿದ್ದಾರೆ. ಈ ಸಂದೇಶದಲ್ಲಿ ನಮ್ಮ ಪ್ರಧಾನಿ ತನ್ನ ” ಉಪಮಹಾ ಖಂಡ ಜನರು ಭಯೋತ್ಪಾದನೆ, ಹಿಂಸೆಗಳಿಂದ ಮುಕ್ತವಾದ ವಾತಾವರಣದಲ್ಲಿ ಪ್ರಜಾಪ್ರಭುತ್ವ, ಶಾಂತಿಪೂರ್ಣ, ಪ್ರಗತಿಶೀಲ ಮತ್ತು ಸಮೃದ್ಧ ಕ್ಷೇತ್ರಕ್ಕಾಗಿ ಒಗ್ಗೂಡಿ ಕೆಲಸ ಮಾಡುವ ಸಮಯ ಆಯಿತು” ಎಂದು ಹಾರೈಸಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ ಮೋದಿಯವರ ಸಂದೇಶ ಪುಲ್ವಾಮ ದಾಳಿ ಯಬಳಿಕ ನೆರೆಯ ಎರಡು ಪರಮಾಣು ದೇಶಗಳಲ್ಲಿ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನ ಪರಿಸ್ಥಿತಿಯ ವೇಳೆಯೇ ಬಂದಿದೆ. ಪುಲ್ವಾಮ ದಾಳಿ ಬಳಿಕ ನಮ್ಮ ವಾಯು ಸೇನೆ ಪಾಕಿಸ್ತಾನದ ಬಾಲಕೋಟ್ನಲ್ಲಿ ಜೈಷೆ ಮುಹಮ್ಮದ್ ಭಯೋತ್ಪಾದಕರ ಕೇಂದ್ರಕ್ಕೆ ದಾಳಿ ನಡೆಸಿತ್ತು. ಆದರೆ, ಹೊಸದಿಲ್ಲಿ ಪಾಕಿಸ್ತಾನದ ಹೈಕಮಿಶನ್ನಲ್ಲಿ ಶುಕ್ರವಾರ ನಡೆದಿದ್ದ ಪಾಕಿಸ್ತಾನ ದಿನಾಚರಣೆ ಕಾರ್ಯಕ್ರಮವನ್ನು ಭಾರತ ಬಹಿಷ್ಕರಿಸಿತ್ತು. ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ಆಮಂತ್ರಣ ನೀಡಿದ್ದನ್ನು ವಿರೋಧಿಸಿ ಭಾರತ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ ಎಂದು ತಿಳಿದು ಬಂದಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೋದಿ ಸಂದೇಶ ಕುರಿತು ಟ್ವೀಟ್ ಮಾಡಿದ್ದು” ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶ ಸಿಕ್ಕಿದೆ. ಅದರಲ್ಲಿ ಅವರು ಪಾಕಿಸ್ತಾನ ರಾಷ್ಟ್ರೀಯ ದಿವಸ ಸಂದರ್ಭದಲ್ಲಿ ದೇಶದ ಜನತೆಗೆ ಅಭಿನಂದನೆ ಮತ್ತು ಶುಭಾಶಯವನ್ನು ಕೋರಿದ್ದಾರೆ. ಉಪಮಹಾಖಂಡದಿಂದ ಭಯೋತ್ಪಾದನೆ ಹಿಂಸೆ ಮುಕ್ತ ವಾತಾವರಣ ಹಾಗೂ ಪ್ರಜಾಪ್ರಭುತ್ವ, ಶಾಂತಿಪೂರ್ಣ, ಪ್ರಗತಿ ಶೀಲ ಹಾಗೂ ಸಮೃದ್ಧ ಕ್ಷೇತ್ರವನ್ನಾಗಿಸಲು ಒಗ್ಗೂಡಿ ಕೆಲಸ ಮಾಡಬೇಕೆಂದು ಅವರು ಹೇಳಿದ್ದಾರೆ.” ಎಂದಿರುವುದು ಟ್ವಿಟ್ಟರ್ ನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ.
ಮೋದಿ ಕಳುಹಿಸಿದ ಸಂದೇಶದ ಕುರಿತು ಟ್ವೀಟ್ ಮಾಡಿದ ಇಮ್ರಾನ್ ಖಾನ್ ಟ್ವೀಟನ್ನು ಹಲವರು ಟ್ರೋಲ್ ಮಾಡಿದ್ದು, ವಿರೋಧ ಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದಲ್ಲದೇ ಮೋದಿ ಸಂದೇಶ ನೀಡಿರುವ ಕುರಿತು ಪುರಾವೆಯನ್ನೂ ಕೂಡ ಹಲವರು ಕೇಳಲಾರಂಭಿಸಿದ್ದಾರೆ.
So now Imran Khan has to tell us that PM Modi sent good wishes to him on Pak National Day? What do the bhakts think of this?
हम उफ़्फ़ भी करते हैं तो हो जाते हैं बदनाम
वो क़त्ल भी करते हैं तो चर्चा नहीं होता— Salman Khurshid (@salman7khurshid) March 22, 2019
तुम करो तो न्यारी लीला,
कोई और करें तो कैरेक्टर ढीला| pic.twitter.com/JhyUHJoKIA— Navjot Singh Sidhu (@sherryontopp) March 22, 2019
What is not surprising is the hypocrisy of this govt which shamelessly politicises national security:
-Pak PM invited for Modiji swearing in
-Saree Shawl Diplomacy
-Uninvited stopover at Pak PM’s family celebrations
-ISI investigates Pathankot
-NSAs meet secretly in Bangkok pic.twitter.com/T1paXH5wbw— Priyanka Chaturvedi (@priyankac19) March 22, 2019












