ಮೋದಿ ಜೀವನ ಚರಿತ್ರೆಯಲ್ಲಿ ಜಾವೇದ್ ಅಕ್ತರ್ ಹೆಸರು: ತಾನು ಹಾಡನ್ನು ರಚಿಸಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಾವೇದ್ ಅಕ್ತರ್

0
796

ಹೊಸದಿಲ್ಲಿ, ಮಾ.23: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಒಮುಂಗ್ ಕುಮಾರ್ ರ ಸಿನೆಮಾ ಪೋಸ್ಟರ್ ನಲ್ಲಿ ತನ್ನ ಹೆಸರು ಸೇರಿಕೊಂಡಿರುವುದಕ್ಕೆ ಪ್ರಸಿದ್ಧ ಗೀತೆ ರಚನಾಕಾರ ಜಾವೇದ್ ಅಕ್ತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೀತೆ ರಚನೆಕಾರ ಎಂದು ಜಾವೇದ್ ಅಕ್ತರ್ ಹೆಸರನ್ನು ಪೋಸ್ಟರ್ ನಲ್ಲಿ ಸೇರಿಸಲಾಗಿದೆ. ಆದರೆ ತಾನು ಈ ಚಿತ್ರಕ್ಕೆ ಗೀತೆ ರಚಿಸಿಲ್ಲ ಎಂದು ಅಕ್ತರ್ ಹೇಳುತ್ತಿದ್ದಾರೆ.

ತನ್ನ ಹೆಸರನ್ನು ಉದ್ಧರಿಸಿದ್ದಕ್ಕಾಗಿ ಜಾವೇದ್ ಅಕ್ತರ್ ಆಶ್ಚರ್ಯ ಪ್ರಕಟಿಸಿದ್ದು ಸಿನೆಮಾ ನಿರ್ಮಾಪಕರು ಈವರೆಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಸಿನೆಮಾದ ಟ್ರೈಲರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಿಡುಗಡೆಗೊಳಿಸಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವವರೆಗಿನ ಪ್ರಧಾನಿಯ ಪಯಣವನ್ನು ಚಿತ್ರದಲ್ಲಿ ಪ್ರದರ್ಶಿಸಲಾಗುತ್ತಿದೆ. ಎಪ್ರಿಲ್ ಐದರಂದು ಸಿನೆಮಾ ಬಿಡುಗಡೆಗೊಳ್ಳಲಿದೆ.