ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುವುದರಲ್ಲಿ ಕಾಂಗ್ರೆಸ್ ವಿಫಲವಾಗಿದೆ- ಸಮಸ್ತ ಮುಶಾವರದ ಉಮರ್ ಫೈಝಿ

0
4394

ಕೋಝಿಕ್ಕೋಡ್,ಮಾ. 24: ಪಾರ್ಲಿಮೆಂಟಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಾಗುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಮಸ್ತ ಮುಶಾವರ ಸದಸ್ಯ ಉಮರ್‍ ಫೈಝಿ ಮುಕ್ಕಂ ಹೇಳಿದರು. ಜನಸಂಖ್ಯಾನುಪಾತಕ್ಕೆ ತಕ್ಕಂತೆ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುವಲ್ಲಿ ಕಾಂಗ್ರೆಸ್ ವಿಫಲಗೊಂಡಿದೆ ಎಂದು ಸಮಸ್ತ ನಾಯಕ ಆರೋಪಿಸಿದರು.

ದೇಶದಲ್ಲಿ ಹೆಚ್ಚು ಮುಸ್ಲಿಮರು ಕಿರುಕುಳಕ್ಕೊಳಗಾಗುತ್ತಿದ್ದಾರೆ. ಅವರಿಗೆ ಅರ್ಹವಾದ ಪ್ರಾತಿನಿಧ್ಯ ನೀಡದಿರುವುದರಿಂದ ಸಮಸ್ಯೆಗಳಿಗೆ ಕಾಂಗ್ರೆಸ್ ನಾಯಕತ್ವವೇ ಜವಾಬ್ದಾರಿಯಾಗಿದೆ. ಅದಕ್ಕೆ ಬೇರೆಯವರನ್ನು ದೂರಿ ಪ್ರಯೋಜನವಿಲ್ಲ ಎಂದು ಉಮರ್ ಪೈಝಿ ಬೆಟ್ಟು ಮಾಡಿ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುವುದು ಸ್ವಾಗತಾರ್ಹ ವಿಷಯವಾಗಿದೆ. ಆದರೆ ರಾಹುಲ್‍ಗಾಗಿ ಸೀಟು ಬಿಟ್ಟುಕೊಡುವ ಟಿ.ಸಿದ್ದೀಕ್‍ರಿಗೆ ಗೆಲ್ಲುವ ಸಾಧ್ಯತೆಯಿರುವ ಇನ್ನೊಂದು ಸೀಟು ಕೊಡಬೇಕಾಗಿದೆ ಎಂದು ಪೈಝಿ ಆಗ್ರಹಿಸಿದರು.